Header Ads
Header Ads
Breaking News

ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗದೇ ಇದ್ದಲಿ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಎಷ್ಟೇ ಬೆವರಿಳಿಸಿದರೂ ವ್ಯರ್ಥ ಪ್ರೊ.ಎಂ.ಎಲ್. ಸುರೇಶನಾಥ್ ಅಭಿಪ್ರಾಯ

 

ಮಂಗಳೂರಿನ ಕೊಣಾಜೆ ನಡುಪದವಿನಲ್ಲಿರುವ ಪಿ.ಎ ಪಾಲಿಟೆಕ್ನಿಕ್ ವಿಭಾಗದ ಪ್ರಸಕ್ತ ವರ್ಷದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಇಲ್ಲಿನ ಸಭಾಂಗಣದಲ್ಲಿ ನಡೆಯಿತು

ಈ ವೇಳೆ ಮಾತನಾಡಿದ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ಹೆಚ್ ಆರ್ ಡಿ ವಿಭಾಗದ ವಿಶ್ರಾಂತ ನಿರ್ದೇಶಕ ಪ್ರೊ.ಎಂ.ಎಲ್. ಸುರೇಶನಾಥ್ , ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗದೇ ಇದ್ದಲ್ಲಿ, ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಎಷ್ಟೇ ಬೆವರಿಳಿಸಿದರೂ ವ್ಯರ್ಥ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪಿ ಸೂಫಿ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ನಿಯಮದಂತೆ ವರ್ತಿಸುವ ಅನಿವಾರ್‍ಯತೆ ಇದೆ. ಎಲ್ಲವೂ ಅವರು ಶಿಕ್ಷಣವನ್ನು ಉತ್ತiವಾಗಿ ಪಡೆಯುವ ದೃಷ್ಟಿಯಿಂದ ರೂಪಿಸಲಾದ ನಿಯಮಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್, ಎಂಬಿ‌ಎ ವಿಭಾಗದ ನಿರ್ದೇಶಕ ಡಾ.ಬೀರಾನ್ ಮೊಯ್ದೀನ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಅಕಾಡೆಮಿಕ್ ನಿರ್ದೇಶಕ ಡಾ.ಸರ್ಫಾಝ್ ಹಾಷಿಂ ಮುಖ್ಯ ಅತಿಥಿಗಳಾಗಿದ್ದರು.

Related posts

Leave a Reply