Header Ads
Header Ads
Breaking News

ಪುಟ್ಟ ಬಾಲಕಿಯ ಯೋಗ ಸಾಧನೆ. ಉದ್ಯಾವರದ ತನುಶ್ರೀಯ ಚಕ್ರಾಸನಕ್ಕೆ ಗಿನ್ನೆಸ್

ಉಡುಪಿಯ ಈ ಪುಟ್ಟ ಬಾಲಕಿ ಎಲ್ಲರನ್ನು ನಿಬ್ಬೇರಾಗುಗೊಳ್ಳಿಸುವ ಸಾಧನೆ ಮಾಡಿದ್ದಾಳೆ. ಮೈ ಮೇಲೆ ಮೂಳೆಯೇ ಇಲ್ಲದಂತೆ ಚಕ್ರಾಕಾರದಲ್ಲಿ ತಿರುಗುತ್ತಾಳೆ. ಇವಳ ದೇಹ ತಿರುಗೋದು ನೋಡಿದ್ರೆ, ನಮಗೆ ತಲೆ ತಿರುಗುತ್ತೆ.ಆದ್ರೆ ಈ ಹುಡುಗಿ ಯೋಗಾಭ್ಯಾಸದ ಮೂಲಕ ಗಿನ್ನಿಸ್ ದಾಖಲೆ ಮಾಡಿ ಎಲ್ಲರ ಮನಸ್ಸನ್ನು ಯೋಗದ ಕಡೆ ತಿರುಗಿಸಿದ್ದಾಳೆ.ಈ ಬಾಲೆಗೆ ಈಗಿನ್ನೂ ಹನ್ನೊಂದರ ಹರೆಯ. ಅದ್ರೆ ಆಕೆ ಉತ್ಸಾಹ , ಲವಲವಿಕೆ ಗಣಿ ನೋಡಿ . ಉಡುಪಿ ಜಿಲ್ಲೆಯ ಉದ್ಯಾವರದ ಈ ಹೆಣ್ಣುಮಗು ತನು ಶ್ರೀ ಈಕೆ.ಈ ಪುಟ್ಟಪೋರಿ ಯೋಗವನ್ನೇ ಉಂಡು, ಉಸಿರಾಡುತ್ತಿದ್ದಾಳೆ  ಅನ್ನಿಸಿಸುತ್ತೆ .

ಇತ್ತೀಚೆಗಷ್ಟೇ ಗಿನ್ನೆಸ್ ದಾಖಲೆಯಲ್ಲಿ ತನ್ನ ಹೆಸರು ಬರೆದಿದ್ದಾಳೆ. ಒಂದು ನಿಮಿಷದಲ್ಲಿ ಯೋಗ ಭಂಗಿಯೊಂದನ್ನು ಅತೀ ಹೆಚ್ಚು ಬಾರಿ ಮಾಡುವ ಮೂಲಕ ಗಿನ್ನೆಸ್ದಾಖಲೆಗೆ ಭಾಜನಳಾಗಿದ್ದಾಳೆ.ಎದೆಭಾಗ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು ನಿಮಿಷಕ್ಕೆ42ಬಾರಿ ಚಲನೆಗೊಳಪಡಿಸಿದ್ದಾಳೆ. ಇದು ಗಿನ್ನಿಸ್ ಪುಟಗಳಲ್ಲಿ ದಾಖಲಾಗಿದೆ. ಇನ್ನು ನಿರಾಲಂಭ ಪೂರ್ಣ ಚಕ್ರಾಸನ ಭಂಗಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ನಲ್ಲೂ ತನ್ನ ಹೆಸರು ದಾಖಲಿಸಿದ್ದಾಳೆ.ಯೋಗಕ್ಕೆಂದು ಈಕೆ ದಿನ ಪೂರ್ತಿ ತರಬೇತಿ ಪಡೆದಿಲ್ಲ. ಪ್ರತೀ ಆಸನವನ್ನೂ ಯೂಟ್ಯೂಬ್ ನಲ್ಲಿ ವೀಕ್ಷಿಸಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಾಸ ಮಾಡಿದ್ದಾಳೆ. ಸತತ ಅಭ್ಯಾಸದ ನಂತರ ಈಗ ಸಾಧನೆಯ ಪುಟದಲ್ಲಿ ಹೆಸರು ಬರೆದಿದ್ದಾಳೆ. ತಂದೆ ಉದಯ ಕುಮಾರ್ ಮತ್ತು ತಾಯಿ ಸಂಧ್ಯಾ ಅವರ ಮಾರ್ಗದರ್ಶನದಲ್ಲಿ ಮನೆಯಲ್ಲಿಯೇ ನಿರಂತರ ಅಭ್ಯಾಸ ಮಾಡುತ್ತಾಳೆ .ಈಕೆ ಉಡುಪಿ ಸೈಂಟ್ಸಿಸಿಲೀಸ್ಶಾಲೆಯಲ್ಲಿ ೪ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

ನೃತ್ಯದಲ್ಲೂ ಇವಳು ನಿಪುಣೆ, ಹಾಗಾಗಿ ಈಕೆಯ ಯೋಗ ಭಂಗಿಗಳಲ್ಲಿ ನೃತ್ಯದ ಛಾಯೆ ಇದೆ. ಹಿಂದೆ ಪ್ಯಾಲೆಸ್ತೀನ್ನ ೧೩ ವರ್ಷದ ಬಾಲಕ ಮೊಹಮ್ಮದ್‌ಆಲ್ಶೇಖ್ಹೆಸರಿನಲ್ಲಿ ಈ ದಾಖಲೆಯಿತ್ತು. ಆತ ನಿಮಿಷಕ್ಕೆ ೩೮ ಬಾರಿ ಈ ಭಂಗಿಯನ್ನು ಮಾಡಿದ್ದ. ಎಪ್ರಿಲ್ ೭ ರಂದು ಈ ದಾಖಲೆಯನ್ನು ಬೀಟ್ ಮಾಡಿ ತನ್ನ ಹೆಸರಿಗೆ ತನುಶ್ರೀ ಎಲ್ಲರ ಹುಬ್ಬೇರಿಸಿದ್ದಾಳೆ. ಉಡುಪಿ ಜಿಲ್ಲಾಡಳಿತ ದ ವತಿಯಿಂದ ತನುಶ್ರೀಗೆ ಸನ್ಮಾನ ನಡೆಯಿತು.ತನುಶ್ರಿ ವಿವಿಧ ಯೋಗಾ ಆಸನದ ಭಂಗಿಯನ್ನು ಮಾಡುವ ಮೂಲಕ ಯೋಗಾಭ್ಯಾಸಿಗಳಲ್ಲಿ ಮತ್ತಷ್ಟು ಹುರುಪು ಮೂಡಿಸಿದಳು.ಇನ್ನಷ್ಟು ಹೊಸ ಹೊಸ ಆಸನಗಳನ್ನು ಬೆರುಗು ಹುಟ್ಟುವಂತೆ ಪ್ರದರ್ಶಿಸುವ ಗುರಿ ತನುಶ್ರೀಯದ್ದು. ಈ ಮೂಲಕ ಮತ್ತಷ್ಟು ಗಿನ್ನಸ್ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ ಉತ್ಸಾಹ ಈಕೆಗಿದೆ. ಯೋಗಾದಿನಾಚರಣೆ ದಿನ ಈ ಯೋಗಾ ಸಾಧಕಿಗೆ ನಾವು ಬೆಸ್ಟ್ ಅಫ್ ಲಕ್ ಹೇಳೋಣ.

Related posts

Leave a Reply