Header Ads
Header Ads
Breaking News

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾ ಕೂಟ : ಕಿನ್ನಿಗೋಳಿ ಮೂಲದ ಅಪೇಕ್ಷಾಳಿಗೆ ಚಿನ್ನದ ಪದಕ

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲಿ ಕಿನ್ನಿಗೋಳಿ ಮೂಲದ ಅಪೇಕ್ಷಾ ಸೋಮವಾರ ನಡೆದ ಅಂಡರ್ -17 ವಿಭಾಗದ 200 ಮೀ ಫ್ರೀಸೈಲ್ ಈ ಜು ಸ್ಪರ್ಧೆಯಲ್ಲಿ ಚಿನ್ನದ ಪಡೆದು ಸಾಧನೆ ಮಾಡಿದ್ದಾರೆ. ರವಿವಾರ ನಡೆದ ಕ್ರೀಡಾ ಕೂಟದಲ್ಲಿ 17 ರವಿಭಾಗದ ಬಾಲಕಿಯರ 400 ಮೀ ಮಿಡ್ಲೆ ಈಜು ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಬಾಲ್ಯದಿಂದಲೂ ಈಜು ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ ಪಡೆದ ಈಕೆ ಕಿನ್ನಿಗೋಳಿಯ ದಾಮಸ್‍ಕಟ್ಟೆಯ ಸಮೀಪದ ಅರಸರಗುತ್ತು ಬಳಿಯ ನಿವಾಸಿ ಡಾ| ಪ್ರೋಬೇಲನ್  ಫೆರ್ನಾಂಡಿಸ್ ಹಾಗೂ ಶಾಲೆಟ್ ಫೆರ್ನಾಂಡಿಸ್ ದಂಪತಿಯ ಪುತ್ರಿಯಾಗಿದ್ದಾರೆ. ಮುಂಬಯಿಯ ಪೂವಾಯಿಯ ಬಾಂಬೆ ಸ್ಯಾಟಿಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾರೆ. ಅಪೇಕ್ಷಾ ಶಾಲಾ ಮಟ್ಟದಲ್ಲಿ ಈಜಿನಲ್ಲಿ ಜಿಲ್ಲಾ ಮಟ್ಟದಲ್ಲಿ ರಾಜ್ಯ , ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಹಿತ ಹಲವಾರು ಚಿನ್ನದ ಪದಕ ಪಡೆದಿದ್ದಾರೆ. ಕ್ರೀಡೆಯ ಜತೆಗೆ ಪಾಠದ ಕಡೆಗೂ ಹೆಚ್ಚಿನ ಗಮನ ನೀಡುತ್ತಿದ್ದು ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಪಡೆದಿದ್ದಾರೆ.

Related posts

Leave a Reply