Breaking News

ಪುತ್ತಿಗೆ ಪದವು ರಸ್ತೆ,  ಕಾಂಕ್ರೀಟು ಆಗಿ ಉದ್ಘಾಟನೆ

ಮೂಡುಬಿದಿರೆಯ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುತ್ತಿಗೆ ಪದವು ಆದಿಶಕ್ತಿ ದೇವಸ್ಥಾನದ ಕಾಂಕ್ರೀಟು ರಸ್ತೆಯನ್ನ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಪಿ. ಸುಚರಿತ ಶೆಟ್ಟಿ ಉದ್ಘಾಟಿಸಿದರು.
ಈ ಕಾಂಕ್ರೀಟು ರಸ್ತೆ ಪಂಚಾಯಿತಿ ಅನುದಾನ ಮತ್ತು ಉದ್ಯೋಗ ಖಾತರಿ ಯೋಜನೆಯ ಒಟ್ಟು ೧೦ ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೇಳೆ ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸದಸ್ಯರಾದ ನಾಗವರ್ಮ ಜೈನ್, ನಾಗರಾಜ ಕರ್ಕೆರಾ, ವೀಣಾ ಶೆಟ್ಟಿ, ಶಶಿಕಲಾ ರಾವ್, ಪಿಡಿ‌ಒ ಮಾರ್ಶಲ್ ಡಿ’ಸೋಜ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Related posts

Leave a Reply