Header Ads
Header Ads
Breaking News

ಪುತ್ತೂರಿಗೆ ಆಗಮಿಸಿದ’ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ

ಪುತ್ತೂರು: ಸ್ವಾಮಿ ವಿವೇಕಾನಂದರ ಚಿಕಾಗೋ ಧರ್ಮ ಸಮ್ಮೇಳನ ಭಾಷಣದ 125ನೇ ವರ್ಷಾಚರಣೆ ಪ್ರಯುಕ್ತ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಇವುಗಳ ಜಂಟಿ ಆಶ್ರಯದಲ್ಲಿ ನಾಡಿನಾದ್ಯಂತ ಸಂಚರಿಸುತ್ತಿರುವ ಮತ್ತೊಮ್ಮೆ ದಿಗ್ವಿಜಯ ಎಂಬ ಹೆಸರಿನ ರಥ ಯಾತ್ರೆಯು ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಸಭಾ ಕಾರ್ಯಕ್ರಮ ನಡೆಯಿತು.ಕಾರ್ಯಕಮ್ರದ ದಿಕ್ಸೂಚಿ ಭಾಷಣದಲ್ಲಿ ಯುವಾ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ, ಸತ್ತು ಹೋಗಿದ್ದ ದೇಶದ ಆತ್ಮಶಕ್ತಿಯನ್ನು ಮತ್ತೆ ಬಡಿದೆಬ್ಬಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು.

  ಹಿಂದೂ ಧರ್ಮ ಚಲಾವಣೆಯಲ್ಲಿ ಇಲ್ಲದ ನಾಣ್ಯ ಎಂದು ಇಡೀ ಜಗತ್ತು ನಂಬಿದ್ದ ಸಂದರ್ಭದಲ್ಲಿ ಹಿಂದೂ ಧರ್ಮವೇ ಜಗತ್ತಿನ ಎಲ್ಲ ಮತಗಳ ಆತ್ಮ ಎಂದು ಸಾಧಿಸಿ ತೋರಿಸಿ ಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಡಾ.ಸುರೇಶ್ ಪುತ್ತೂರಾಯ ವಹಿಸಿದ್ದರು. ನರೇಂದ್ರ ಕಾಲೇಜಿನ ಪ್ರಿನ್ಸಿಪಾಲ್ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು. ರಥಯಾತ್ರೆಯಲ್ಲಿ ಸಾಗುತ್ತಿರುವ ಯುವಾ ಬ್ರಿಗೇಡ್‌ನ ಐವರು ಕಾರ್ಯಕರ್ತರನ್ನು ಈ ಸಂದರ್ಭ ಗೌರವಿಸಲಾಯಿತು.ಸಭಾ ಕಾರ್ಯಕ್ರಮಕ್ಕೆ, ಮುನ್ನ ರಥಯಾತ್ರೆಯು ಸುಳ್ಯದಿಂದ ಪುತ್ತೂರಿಗೆ ಬಂದಾಗ ದರ್ಬೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಶೋಭಾಯಾತ್ರೆಯನ್ನು ಡಾ.ಪಿ. ಗೌರಿ ಪೈ ಮತ್ತು ಮುಳಿಯ ಕಾವೇರಮ್ಮ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆಗಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.

Related posts

Leave a Reply