Header Ads
Header Ads
Breaking News

ಪುತ್ತೂರಿಗೆ ಇನ್ನೂ ದೊರೆಯದ ಇಂದಿರಾ ಕ್ಯಾಂಟೀನ್ ಭಾಗ್ಯ

ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರವನ್ನು ಪೂರೈಸುವ ರಾಜ್ಯ ಸರಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಭಾಗ್ಯ ಪುತ್ತೂರಿನ ಜನತೆಗೆ ದೊರೆತಿಲ್ಲ. ಪುತ್ತೂರಿನ ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ವರ್ಷದ ಹಿಂದೆಯೇ ಶಂಕುಸ್ಥಾಪನೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ಆದರೆ ಶಂಕುಸ್ಥಾಪನೆಯ ಬಳಿಕ ನಿಧಾನಗತಿಯಲ್ಲಿ ಸಾಗಿದ ಕ್ಯಾಂಟೀನ್ ನಿರ್ಮಾಣ ಕಾರ್ಯ ಇದೀಗ ಭಾಗಶ ಮುಗಿದಿದ್ದರೂ, ಕ್ಯಾಂಟೀನ್ ಆರಂಭಿಸುವ ಮುಹೂರ್ತ ಮಾತ್ರ ಇಂದಿನವರೆಗೂ ಫಿಕ್ಸ್ ಆಗಿಲ್ಲ.ರಾಜ್ಯದ ಬಹುತೇಕ ಭಾಗದ ಜನ ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್ ನ ಆಹಾರದ ಸವಿಯನ್ನು ಸವಿದಿದ್ದಾರೆ. ಬಡ ಜನತೆಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರವನ್ನು ಪೂರೈಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಪುತ್ತೂರಿನಲ್ಲೂ ಇದೇ ರೀತಿಯ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವರ್ಷದ ಹಿಂದೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಅದ್ದೂರಿಯಿಂದ ನಡೆದಿದ್ದ ಶಂಕುಸ್ಥಾಪನೆಯನ್ನು ಹೊರತುಪಡಿಸಿದರೆ, ಕ್ಯಾಂಟೀನ್ ಕಾಮಗಾರಿ ಮಾತ್ರ ಆಮೆಗತಿಯಿಂದ ಸಾಗಿದೆ. ಇದೀಗ ಕಾಮಗಾರಿಯು ಭಾಗಶ ಮುಗಿದಿದ್ದು, ಕ್ಯಾಂಟೀನ್ ನನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡುವ ಲಕ್ಷಣಗಳು ಮಾತ್ರ ತೋರುತ್ತಿಲ್ಲ. ಪುತ್ತೂರು ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ಈ ಕ್ಯಾಂಟೀನ್ ನ ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕ್ಯಾಂಟೀನ್ ನಲ್ಲಿ ಆಹಾರ ಪೂರೈಕೆ ಆರಂಭವಾದಲ್ಲಿ ಸರಕಾರಿ ಕಛೇರಿಗಳಿಗೆ ಬರುವ ಜನರಿಗೆ ಉಪಯೋಗವಾಗಲಿದೆ. ಕ್ಯಾಂಟೀನ್ ಕಟ್ಟಡದ ಕಾಮಗಾರಿಯನ್ನು ಭಾಗಶ ಪೂರ್ಣಗೊಳಿಸಲಾಗಿದ್ದು, ಇನ್ನು ಒಳ ಭಾಗದ ಕೆಲವು ಕಾಮಗಾರಿಗಳು ಬಾಕಿ ಉಳಿದಿವೆ. ಅಲ್ಲದೆ ಆವರಣ ಗೋಡೆಯ ನಿರ್ಮಾಣವೂ ಆಗಬೇಕಿದೆ. ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಕ್ಯಾಂಟೀನ್ ನಡೆಸುವವನ್ನು ಟೆಂಡರ್ ಮೂಲಕ ಆಹ್ವಾನಿಸುವ ಕಾರ್ಯ ನಡೆಯಬೇಕಿದೆ. ಶಂಕುಸ್ಥಾಪನೆಯ ಬಳಿಕ ಕ್ಯಾಂಟೀನ್ ಕಟ್ಟಡ ಮೇಲೇರಲೇ ಒಂದು ವರ್ಷ ಕಳೆದಿದ್ದು, ಇನ್ನು ಆಹಾರ ಪೂರೈಕೆಗಾಗಿ ಜನ ಎಷ್ಟು ಸಮಯ ಕಾಯಬೇಕು ಎನ್ನುವ ನಿರೀಕ್ಷೆಯಲ್ಲಿ ಪುತ್ತೂರಿನ ಜನರಿದ್ದಾರೆ.

Related posts

Leave a Reply