Header Ads
Header Ads
Breaking News

ಪುತ್ತೂರಿನಲ್ಲಿ ಅಪರಾಧ ತಡೆ ಮಾಸಾಚರಣೆ

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಬೊಳುವಾರಿನಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ತನಕ ವಾಕಥಾನ್ ಜಾಗೃತಿ ಕಾರ್ಯಕ್ರಮ ದ.ಕ.ಜಿಲ್ಲಾ ಪೊಲೀಸ್, ಲಯನ್ಸ್ ಕ್ಲಬ್ ಪುತ್ತೂರು ಮತ್ತು ರೋಟರಿ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ನಡೆಯಿತು. 

ಡಿವೈಎಸ್ಪಿ ಶ್ರೀನಿವಾಸ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಪೊಲೀಸ್ ಸಿಬ್ಬಂದಿಗಳು, ರೋಟರಿ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರುಗಳು, ಗೃಹರಕ್ಷದಳದ ಸಿಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತಿ ಬ್ಯಾನರ್‌ನ್ನು ಹಿಡಿದು ಜಾಗೃತಿ ಮೂಡಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಹರೀಶ್ ಅಪರಾಧ ತಡೆಯಲು ಸುರಕ್ಷಾ ಸಲಹೆಗಳ ಉದ್ಘೋಷಣೆ ಮಾಡಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಸಮಾರೋಪ ಸಮಾರಂಭ ನಡೆಯಿತು. ಎಸ್.ಐ ಒಮನ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ನಾರಾಯಣ ರೈ ಸೇರಿದಂತೆ ಸಿಬಂದಿಗಳು, ಗೃಹರಕ್ಷದಳದವರು ಉಪಸ್ಥಿತರಿದ್ದರು.

Related posts

Leave a Reply