Header Ads
Header Ads
Breaking News

ಪುತ್ತೂರಿನಲ್ಲಿ ಕೇಂದ್ರದ ವಿರುದ್ದ ರಿಕ್ಷಾ ಚಾಲಕರ ಪ್ರತಿಭಟನೆ. ದರ್ಬೆ ಸರ್ಕಲ್‌ನಿಂದ ಮಿನಿ ವಿಧಾನಸೌಧವರೆಗೆ ರ್‍ಯಾಲಿ.

ಪುತ್ತೂರು : ಅಟೋ ಚಾಲಕ ಮಾಲಕರಿಗೆ ಸಮಸ್ಯೆಯಾಗಿ ಕಾಡುತ್ತಿರುವ ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ನೀತಿ , ವಿಮಾ ಕಾನೂನು, ಅವೈಜ್ಞಾನಿಕ ಸಾರಿಗೆ ನೀತಿ ಮತ್ತಿತರ ಕಾನೂನು ನೀತಿಗಳನ್ನು ವಿರೋಧಿಸಿ ಪುತ್ತೂರಿನ ಸೋಷಿಯಲ್ ಡೆಮೊಕ್ರಟಿಕ್ ಅಟೋ ಯೂನಿಯನ್ ಸಂಘಟನೆಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ರಿಕ್ಷಾ ಚಾಲಕರಿಂದ ಅಟೋ ರ್‍ಯಾಲಿ-ಪ್ರತಿಭಟನೆ ನಡೆಯಿತು.ಪುತ್ತೂರಿನ ದರ್ಬೆ ಬೈಪಾಸ್ ಸರ್ಕಲ್ ಬಳಿಯಿಂದ ಅಟೋ ರ್‍ಯಾಲಿಯ ಮೂಲಕ ಮಿನಿ ವಿಧಾನ ಸೌಧದ ಬಳಿಗೆ ಆಗಮಿಸಿದ ರಿಕ್ಷಾ ಚಾಲಕರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಟೋ ಚಾಲಕ ವಿರೋಧಿ ನೀತಿಯನ್ನು ಖಂಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅವರು ಆಡಳಿತ ನಡೆಸಿದ ಯಾವುದೇ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಅಟೋ ರಿಕ್ಷಾ ಚಾಲಕರ ಬಗ್ಗೆ ಪ್ರಸ್ತಾಪ ಕೂಡ ಮಾಡದೆ ಅಟೋ ರಿಕ್ಷಾ ಚಾಲಕ -ಮಾಲಕರಾಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.ಸೋಷಿಯಲ್ ಡೆಮೊಕ್ರಟಿಕ್ ಅಟೋ ಯೂನಿಯನ್‌ನ ಪುತ್ತೂರು ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಕುಂಞಿ ಮಾಂತೂರು, ಜಿಲ್ಲಾ ಸಂಚಾಲಕ ಜಾಬೀರ್ ಅರಿಯಡ್ಕ, ತಾಲ್ಲೂಕು ಸಂಚಾಲಕ ಅಶ್ರಫ್ ಬಾವು, ತಾಲ್ಲೂಕು ಕಾರ್ಯದರ್ಶಿ ಹಂಝ ಮಣಿಯ ಮತ್ತಿತರರು ಹಾಜರಿದ್ದರು.

Related posts

Leave a Reply