Header Ads
Breaking News

ಪುತ್ತೂರಿನಲ್ಲಿ ಕ್ಯಾಟಲ್ ಫೀಡ್ ಪ್ಯಾಕ್ಟರಿ ತೆರೆಯುವ ಚಿಂತನೆ ನಮ್ಮ ಮುಂದಿದೆ : ಶಾಸಕ ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಕೊರೋನಾ ಲಾಕ್‍ಡೌನ್‍ನಿಂದ ಭಾರತದ ಆರ್ಥಿಕತೆ ಮತ್ತು ಜನ ಜೀವನಕ್ಕೆ ಆದ ಹೊಡೆತವನ್ನು ನೀಗಿಸುವ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯ ರೂ. 20 ಲಕ್ಷ ಕೋಟಿಯ ಪ್ಯಾಕೇಜನ್ನು ಭಾರತದ 130 ಕೋಟಿ ಜನರಿಗೆ ಸಹಾಯ ಆಗುವ ರೀತಿಯಲ್ಲಿ ಮಾಡಿದ್ದಾರೆ. ಇದು ಹೊಸ ಉದ್ಯೋಗಳನ್ನು ಸೃಷ್ಟಿ ಮಾಡಿ ಗ್ರಾಮೀಣ ಭಾರತವನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಾಯ ಆಗಲಿದೆ. ಪುತ್ತೂರಿನಲ್ಲಿ ಕ್ಯಾಟಲ್ ಫೀಡ್ ಪ್ಯಾಕ್ಟರಿ ತೆರೆಯುವ ಚಿಂತನೆ ನಮ್ಮ ಮುಂದಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪ್ರಧಾನಿ ಸಂದೇಶದ ಬಳಿಕ ಬುಧವಾರದಂದು ಕೇಂದ್ರದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮತ್ತು ರಾಜ್ಯ ಖಾತೆ ಸಚಿವರು ರೂ. 20 ಲಕ್ಷ ಕೋಟಿಯನ್ನು ಯಾವ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ದೇಶದ ಜನತೆಯ ಮುಂದಿಟ್ಟಿದ್ದ ಹಿನ್ನೆಲೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕರು, ಪ್ರಧಾನಿಯವರ ಉದ್ದೇಶ ಸ್ವಾವಲಂಭಿ ಭಾರತ. ಆರ್ಥಿಕ ಚೈತನ್ಯವನ್ನು ನೀಡುವ ಕೆಲಸ ಆಗಿದೆ. ಪ್ರಮುಖವಾಗಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ರೂ. 3 ಲಕ್ಷ ಕೋಟಿ ನೀಡಿದೆ.

ವಿಶೇಷವಾಗಿ ಆರ್ಥಿಕವಾಗಿ ಉತ್ತೇಜನ ಕೊಡುವ ಮೀನುಗಾರಿಕೆಗೆ ಮೀನುಗಾರಿಕೆ ಸಚಿವಾಲಯ ಪ್ರತ್ಯೇಕ ತೆರೆಯಲಾಗುತ್ತದೆ. ಇನ್‍ಕಮ್ ಟ್ಯಾಕ್ಸ್ ಕಟ್ಟುವರಿಗೂ ಸೌಲಭ್ಯ, ಇಂಡಸ್ಟ್ರೀಯಲ್ ನಿರ್ಮಾಣಕ್ಕೂ ಸಾಲದ ವ್ಯವಸ್ಥೆ ಮಾಡಲಾಗಿದ್ದು ಒಟ್ಟಿನಲ್ಲಿ ಉದ್ಯೋಗಳನ್ನು ಸೃಷ್ಟಿ ಮಾಡಿ ಗ್ರಾಮೀಣ ಭಾರತವನ್ನು ಅಭಿವೃದ್ಧಿ ಮಾಡುವುದು ಪ್ರಧಾನಿ ಉದ್ದೇಶವಾಗಿದೆ. ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಂಡು ಕೊಳ್ಳುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ್ ಮಾಡಿದ್ದಾರೆ. ಅದರ ಜೊತೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕುಡಾ ಒಂದಷ್ಟು ಪ್ಯಾಕೇಜ್ ನೀಡಿದ್ದಾರೆ. ಮಧ್ಯಮ ವರ್ಗದ ಕೆಳಗಿನವರಿಗೆ ರಿಕ್ಷಾ ಚಾಲಕರಿಗೆ, ಕಾರ್ಮಿಕರಿಗೆ, ಹೊಟೇಲ್ ಕಾರ್ಮಿಕರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕಿನ ವ್ಯವಸ್ಥೆ ಮಾಡಿದ್ದಾರೆ. ಕೊರೋನಾದಿಂದ ಆರ್ಥಿಕ ಹಿನ್ನಡೆಯಾಗಿ ಜನಜೀವನ ಸ್ತಬ್ಧ ಆದರೂ ಜನಜೀವನ ಮತ್ತೆ ಸಹಜ ಸ್ಥಿತಿಗೆ ತಂದು ಜನರ ದಿನ ನಿತ್ಯದ ಆಹಾರ ಬೇಡಿಕೆ, ಅವರ ಉದ್ಯೋಗಕ್ಕೆ ಸಂಬಂಧಿಸಿ ವಿಚಾರಕ್ಕೆ ಒತ್ತು ಕೊಟ್ಟು ಭಾರತಕ್ಕೆ ಪರಿವರ್ತನೆ ತರುವ ಮೂಲಕ ಒಂದು ಸ್ವಾಭಿಮಾನಿ ಸ್ವಾವಲಂಭಿ ಭಾರತವನ್ನು ರೂಪಿಸುವ ಕೆಲಸ ದೇಶದ ಪ್ರಧಾನಿ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *