Header Ads
Header Ads
Header Ads
Breaking News

ಪುತ್ತೂರಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ ಮದ್ಯಮುಕ್ತ ಸಾಮಾಜ ನಿರ್ಮಾಣಕ್ಕೆ ಪ್ರಜಾರಂಗಗಳ ಪ್ರಯತ್ನ ಅಗತ್ಯ ರಾಜ್ಯ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಹೇಳಿಕೆ

ಗಾಂಧೀಜಿಯವರ ರಾಮರಾಜ್ಯದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲೇ ಮದ್ಯಪಾನ ಸಂಯಮ ಮಂಡಳಿ ರಚನೆಯಾಗಿದೆ. ಆದರೆ ಸಂಯಮ ಮಂಡಳಿ, ಜನಜಾಗೃತಿ ಸಮಿತಿಗಳಿಂದಷ್ಟೇ ಮದ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಮಾಧ್ಯಮಗಳ ಸಹಿತ ಪ್ರಜಾರಂಗಗಳ ಪ್ರಯತ್ನ ಅತಿ ಅಗತ್ಯ ಎಂದು ರಾಜ್ಯ ಸಂಯಮ ಮಂಡಳಿ ಅಧ್ಯಕ್ಷ ಎಚ್. ಸಿ. ರುದ್ರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶ್ರೀ ಕ್ಷೇತ್ರ. ಧರ್ಮಸ್ಥಳ. ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ಪುರಭವನದಲ್ಲಿ ಆಯೋಜಿಸಲಾದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇರು ಬಿಟ್ಟಿರುವ ಮದ್ಯಪಾನದಂತಹ ವ್ಯವಸ್ಥೆಯನ್ನು ಪ್ರಜಾ ರಾಜ್ಯದಲ್ಲಿ ಮನಪರಿವರ್ತನೆಯಿಂದ ಮಾತ್ರ ದೂರಗೊಳಿಸಲು ಸಾಧ್ಯ ಎಂದು ಅಭಿಪ್ರಾಯಿಸಿದ ಅವರು, ಮದ್ಯಪಾನ ಸಂಯಮ ಮಂಡಳಿಯೂ ಇದೇ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವಂತೆ ಸೀಮಿತಗೊಳಿಸಲಾಗಿದೆ. ಮಂಡಳಿಯ ವಾರ್ಷಿಕ ಬಜೆಟ್ ಇರುವುದೂ 80 ಲಕ್ಷ ರೂ. ಮಾತ್ರ. ಆದರೂ ಈ ಹಿಂದೆ ಈ ಬಜೆಟ್ ಖರ್ಚಾಗಿರಲಿಲ್ಲ. 12 ಮಂದಿ ಸ್ವಾತಂತ್ರ್ಯ ಹೋರಾಟಗಾರರೇ ಮಂಡಳಿಯ ಅಧ್ಯಕ್ಷರಾಗಿದ್ದರೂ ಮಂಡಳಿಯ ವ್ಯಾಪ್ತಿಯನ್ನೂ ಅವರು ಅರಿತಿರಲಿಲ್ಲ. ಆದರೆ ಇತ್ತೀಚೆಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಮಂಡಳಿಯ ಉದ್ದೇಶ ಸಾಕಾರಗೊಳ್ಳುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕುಡಿತದ ಪರಿಸ್ಥಿತಿಯ ಅನುಭವವನ್ನು ಎದುರಿಸುವವರು ಹೆಣ್ಣು ಮಕ್ಕಳು. ಸರಕಾರದ ಕಾನೂನಿಗಿಂತಲೂ ನಮಗೆ ನಾವೇ ನಿಯಂತ್ರಣ ಮಾಡಿಕೊಳ್ಳುವುದು ಅತಿ ಅಗತ್ಯ ಎಂದರು.

ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಅವರು ಸಂಯಮ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಬಳಿಕ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸದಸ್ಯ ಕೆ. ಭಾಸ್ಕರ ಕೋಡಿಂಬಾಳ, ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು., ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ , ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಜನಜಾಗೃತಿ ವೇದಿಕೆ ದ. ಕ. ಜಿಲ್ಲಾಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ಸದಸ್ಯ ಯಾಕೂಬ್,ದ.ಕ. ಜಿಲ್ಲಾ ಕುಷ್ಠರೋಗ ಹಾಗೂ ಮಾನಸಿಕ ರೋಗ ನಿರ್ಮೂಲನೆ ಕಾರ್ಯಕ್ರಮಾಽಕಾರಿ ಡಾ| ರತ್ನಾಕರ, ದ.ಕ. ಜಿಲ್ಲಾ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕಾಽಕಾರಿ ಖಾದರ್ ಶಾ, ಪುತ್ತೂರು ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ ಶುಭಹಾರೈಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ದ. ಕ. ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ, ಜನಜಾಗೃತಿ ವೇದಿಕೆ ರಾಜ್ಯ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಮಹಿಳಾ ಮತ್ತು ಶಿಶು ಕಲ್ಯಾಣಾಽಕಾರಿ ಶಾಂತಿ ಟಿ. ಹೆಗ್ಡೆ, ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಯೋಜನೆಯ ಪುತ್ತೂರು ತಾಲೂಕು ಯೋಜನಾಽಕಾರಿ ಧರ್ಣಪ್ಪ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply