Header Ads
Header Ads
Breaking News

ಪುತ್ತೂರಿನಲ್ಲಿ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ. ಚಿನ್ನಾಭರಣದ ನೂತನ ಮಳಿಗೆ ಶುಭಾರಂಭ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಂದ ಉದ್ಘಾಟನೆ.

ದೇಶದ ಪ್ರಮುಖ ಜ್ಯುವೆಲ್ಲರಿ ಸಮೂಹಗಳಲ್ಲಿ ಒಂದಾಗಿರುವ “ಜೋಸ್ ಆಲುಕ್ಕಾಸ್” ನೂತನ ಮಳಿಗೆ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂದೂಸ್ತಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಬೆಳಗ್ಗೆ ಶುಭಾರಂಭಗೊಂಡಿತು.ಪುತ್ತೂರು ಶಾಸಕ ಸಂಜೀವ ಮಠಂದೂರು ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಮುತ್ತಿನ ಊರು ಪುತ್ತೂರು ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಚಿನ್ನದ ನಾಡಿಗೆ ಹೆಸರುವಾಸಿಯಾಗಿದ್ದು, ಎಲ್ಲೆಡೆ ಮನೆ ಮಾತಾಗಿರುವ “ಜೋಸ್ ಆಲುಕ್ಕಾಸ್” ತನ್ನ ಮಳಿಗೆಯನ್ನು ಸ್ಥಾಪಿಸುವುದರೊಂದಿಗೆ ಪುತ್ತೂರಿಗೆ ಚಿನ್ನದ ಗರಿ ನೀಡಿದಂತಾಗಿದೆ. ಜಿಲ್ಲೆಯ ಎರಡನೇ ಅತೀ ದೊಡ್ಡ ವಾಣಿಜ್ಯ ಕೇಂದ್ರವಾಗಿರುವ ಪುತ್ತೂರು ಬಹುತೇಕ ಜನರು ವಾಣಿಜ್ಯ ಬೆಳೆಗಳನ್ನೇ ನಂಬಿಕೊಂಡು ತನ್ನ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿದ್ದಾರೆ. ಜತೆಗೆ ಜನತೆ ವೈವಿಧ್ಯಮಯ ಚಿನ್ನಾಭರಣಕ್ಕೆ ಮಾರು ಹೋಗುತ್ತಿದೆ. ಈ ನಿಟ್ಟಿನಲ್ಲಿ ಮಳಿಗೆ ಗ್ರಾಹಕರ ಇಚ್ಚೆಗನುಗುಣವಾಗಿ ಆಧುನಿಕತೆಯ ಮೆರುಗು ನೀಡಿ, ಇತರ ಸಂಸ್ಥೆಗಳಿಗೆ ಸ್ಪರ್ಧಾತ್ಮಕವಾಗಿ, ಪಾರದರ್ಶಕ ಆಡಳಿತದೊಂದಿಗೆ ಉತ್ತಮ ವ್ಯವಹಾರ ನಡೆಸುವುದರೊಂದಿಗೆ ಗ್ರಾಹಕರ ವಿಶ್ವಾಸ ಗಳಿಸಿ ಇನ್ನಷ್ಟು ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.ಎಫ್‌ಎಂ ರೇಡಿಯೋ ನಿರೂಪಕ, ಕಲಾವಿದ ರೂಪೇಶ್ ಶೆಟ್ಟಿ ಮಾತನಾಡಿ, “ಜೋಸ್ ಆಲುಕ್ಕಾಸ್” ವಿಶ್ವಾಸಾರ್ಹ ಆಭರಣಗಳಿಗೆ ಹೆಸರುವಾಸಿಯಾಗಿದ್ದು, ಬೇರೆ ಎಲ್ಲೂ ಸಿಗ ಕಲೆಕ್ಷನ್ ಈ ಮಳಿಗೆಯಲ್ಲಿ ದೊರೆಯುತ್ತಿದೆ. ಈ ಮೂಲಕ ಮಳಿಗೆಗೆ ಆಗಮಿಸುವ ಗ್ರಾಹಕರು ತನ್ನ ಆಯ್ಕೆಯೊಂದಿಗೆ ಖುಸಿಯಿಂದ ತೆರಳುವಂತಾಗಿರುವುದು ಅಭಿನಂದನಾರ್ಹ. ಪುತ್ತೂರಿನಲ್ಲಿ ಇನ್ನಷ್ಟು ಸಂಸ್ಥೆಯನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದರು.ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಮಹಮ್ಮದಾಲಿ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಸಿನೆಮಾ ತಾರೆಯರಾದ ನೀಮಾ ರೇ, ಚಿರಶ್ರೀ ಅಂಚನ್, ಜೋಸ್ ಆಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷರಾದ ಜೋಸ್ ಆಲುಕ್ಕಾ, ಗ್ರೂಪ್ ನಿರ್ವಾಹಕ ನಿರ್ದೇಶಕರುಗಳಾದ ವರ್ಗೀಸ್ ಆಲುಕ್ಕಾ, ಪಾಲ್ ಜೆ.ಆಲುಕ್ಕಾ, ಜಾನ್ ಆಲುಕ್ಕಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶುಭಾರಂಭದ ಪ್ರಯುಕ್ತ ವಿಶೇಷ ಕೊಡುಗೆಯಾಗಿ ಜೋಸ್ ಆಲುಕ್ಕಾಸ್ 30 ಸಾವಿರ ರೂ. ಮೌಲ್ಯದ ಚಿನ್ನ ಖರೀದಿಗೆ ಬಂಗಾರದ ನಾಣ್ಯಗಳನ್ನು ಕೊಡುಗೆಯಾಗಿ ನೀಡುತ್ತಿದೆ. ವಿವಾಹ ಸಂದರ್ಭ ಖರೀದಿಯ ಗ್ರಾಹಕರಿಗೆ ಉದ್ಘಾಟನಾ ಕೊಡುಗೆಗಳು ಹಾಗೂ ವಿಶೇಷ ರಿಯಾಯಿತಿಗಳು ದೊರೆಯಲಿವೆ.ಪುತ್ತೂರಿನ ನೂತನ ಮಳಿಗೆ ತಮ್ಮ ವಿಶೇಷವಾದ ಮದುವೆ ಆಭರಣ ಸಂಗ್ರಹ “ಶುಭಮಾಂಗಲ್ಯಂ”, ಸಾಂಪ್ರದಾಯಿಕ ದೇವಸ್ಥಾನ ಆಭರಣ “ಪರಂಪರಾ”, ಸೊಗಸಾದ ವಜ್ರಗಳ ಸಂಗ್ರಹ “ಝೈರಾ”, ಪುರಾತನ ಆಭರಣ “ಧಾರಾ”, ರಾಜಮನೆತನದ ಆಭರಣ ಸಂಗ್ರಹ “ರಾಜಮುಖಿ”, ಪೋಲ್ಕಿ ಕಲ್ಲಿನ ಆಭರಣ “ಚಕ್ರ”, ವಧುವಿನ ವಜ್ರದ ಆಭರಣ “ವಿವಾಹ್”, ಆನ್‌ಕಟ್ ವಜ್ರದ ಆಭರಣ “ಅನಂತ”, ಅಮೂಲ್ಯ ಕಲ್ಲುಗಳ ಆಭರಣ “ಇಂದ್ರ” ಮತ್ತು ಕ್ಲಾಸಿಕ್ ಚಿನ್ನದ ಆಭರಣ “ಮೆಹಫಿಲ್” ಶ್ರೇಣಿಗಳ ಪ್ರದರ್ಶನ ಹಾಗೂ ಮಾರಾಟ ಸೌಲಭ್ಯವಿದೆ.ಪ್ರಾಮಾಣಿಕೃತ ಕಂಪೆನಿಯಾದ ಜೋಸ್ ಆಲುಕ್ಕಾಸ್, ಸರಕಾರದ ಪ್ರಾಮಾಣಿತ ಬಿಐಎಸ್ ಹಾಲ್‌ಮಾರ್ಕ್ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಮಳಿಗೆಯಲ್ಲಿ ಮಾಸಿಕ ಕಂತುಗಳ ಸ್ಕೀಂ ಕೂಡಾ ಜಾರಿಯಲ್ಲಿದ್ದು, ಗ್ರಾಹಕರು ಮಾಸಿಕ ಕಂತುಗಳಲ್ಲಿ ಶುದ್ಧ 916 ಹಾಲ್‌ಮಾರ್ಕ್ ಚಿನ್ನವನ್ನು ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಳಿಗೆಯು ಅಂತರಾಷ್ಟ್ರೀಯ ಪ್ರಯೋಗಾಲಯಗಳ ಪ್ರಮಾಣಪತ್ರಗಳನ್ನು (ಐಜಿಐ/ಜಿಐಎ) ಪಡೆದ ವಜ್ರಾಭರಣಗಳ ವೈವಿದ್ಯಮಯ ಶ್ರೇಣಿಯನ್ನು ಹೊಂದಿದ್ದು, ಇವುಗಳ ಬೆಲೆ ಕೇವಲ ಐದು ಸಾವಿರದಿಂದ ಆರಂಭವಾಗುತ್ತದೆ. ಜತೆಗೆ ಎಲ್ಲಾ ವಜ್ರಾಭರಣಗಳ ಮೇಲೆ ಶೇಕಡಾ 20 ರಿಯಾಯಿತಿ ಇದೆ.ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಹೊರಗೆ ಆನೆಯ ಸ್ತಬ್ಧ ಚಿತ್ರವನ್ನು ನಿರ್ಮಿಸಲಾಗಿದ್ದು, ಪುತ್ತೂರಿನ ಜನತೆಯ ಗಮನ ಸೆಳೆಯಿತು. ಬೆಳಗ್ಗಿನಿಂದಲೇ ಕಿಕ್ಕಿರಿದು ತುಂಬಿದ ಗ್ರಾಹಕ ವರ್ಗದವರು ಚಿನ್ನಾಭರಣ, ವಜ್ರಾಭರಣ ಖರೀದಿಯಲ್ಲಿ ತೊಡಗಿಕೊಂಡರು.

Related posts

Leave a Reply