Header Ads
Header Ads
Header Ads
Breaking News

ಪುತ್ತೂರಿನಲ್ಲಿ ಜ.7 ರಂದು ಸಿ‌ಎಂ ಅವರಿಗೆ ಜೆಡಿ‌ಎಸ್ ಪಕ್ಷದಿಂದ ಕರಿಪತಾಕೆ ಪ್ರದರ್ಶನ

 

ಪುತ್ತೂರು: ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ಶಾಂತಿಸಾಮರಸ್ಯ ಕಾಪಾಡುವಲ್ಲಿ ಕಾಂಗ್ರೆಸ್ ಆಡಳಿತ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಜನವರಿ 7 ರಂದು ಪುತ್ತೂರಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಜೆಡಿ‌ಎಸ್ ಪಕ್ಷದ ವತಿಯಿಂದ ಕರಿಪತಾಕೆ ಪ್ರದರ್ಶನ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಜೆಡಿ‌ಎಸ್ ರಾಜ್ಯಕಾರ್ಯದರ್ಶಿ ಅಶ್ರಫ್ ಕಲ್ಲೇಗ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಸಿದ ಸೌಹಾರ್ದ ಪಾದಯಾತ್ರೆಯು ರಾಜಕೀಯ ನಾಟಕವಾಗಿದೆ. ಚುನಾವಣೆ ಹತ್ತಿರ ಬರುವಾಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೌಹಾರ್ದತೆಯ ನೆನಪಾಗಿದೆ ಎಂದು ಅಶ್ರಫ್ ಕಲ್ಲೇಗ ಟೀಕಿಸಿದರು.

ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಕೃತ್ಯವನ್ನು ಜೆಡಿ‌ಎಸ್ ಖಂಡಿಸುತ್ತದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿ‌ಎಸ್ ಮುಂದಾಳುಗಳಾದ ಇಬ್ರಾಹಿಂ ಗೋಳಿಕಟ್ಟೆ, ಬಿ. ಕರೀಂ ಪಳ್ಳತ್ತೂರು ಉಪಸ್ಥಿತರಿದ್ದರು.

Related posts

Leave a Reply