Header Ads
Breaking News

ಪುತ್ತೂರಿನಲ್ಲಿ ನಗರಸಭೆಯಿಂದ ಪರಿಸರ ಜಾಥಾ

ಪುತ್ತೂರು ನಗರದಲ್ಲಿ ಮಂಗಳವಾರ ಪರಿಸರ ಜಾಗೃತಿ ಮತ್ತು ಘನತ್ಯಾಜ್ಯ ಅರಿವು ಜಾಗೃತಿ ಜಾಥಾ ನಡೆಯಿತು. ಈ ಜಾಥಾಕ್ಕೆ ನಗರಸಭಾ ಆಯುಕ್ತೆ ರೂಪಾ ಶೆಟ್ಟಿ ಚಾಲನೆ ನೀಡಿದರು.ಪುತ್ತೂರು ನಗರಸಭೆಯ ವತಿಯಿಂದ ನಗರ ವ್ಯಾಪ್ತಿಯಲ್ಲಿ 5 ದಿನಗಳ ಕಾಲ ನಡೆದ ಪರಿಸರ ಜಾಗೃತಿ ಸರಣಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವಾಗಿ ಮಂಗಳವಾರ ದರ್ಬೆಯಿಂದ ಬೊಳುವಾರು ತನಕ ಘನತ್ಯಾಜ್ಯ ಅರಿವು ಜಾಗೃತಿ ಜಾಥಾ ನಡೆಯಿತು.    ಜಾಥಾದ ಮೂಲಕ ಘನತ್ಯಾಜ್ಯ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಅಂಗಡಿ ಮಳಿಗೆಗಳಿಗೆ ಮತ್ತು ಮನೆಗಳಿಗೆ ಕರಪತ್ರಗಳನ್ನು ಹಂಚಿ, ಮುಂದೆ ವಿಂಗಡಿಸಿಯೇ ಘನತ್ಯಾಜ್ಯ ನೀಡುವಂತೆ ಮನವಿ ಮಾಡಲಾಯಿತು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಪುತ್ತೂರು ಜೇಸಿಐ ಅಧ್ಯಕ್ಷ ದಾಮೋದರ ಪಾಟಾಳಿ ,ನಗರಸಭೆಯ ಸಹಾಯಕ ಎಂಜಿನಿಯರ್ ಪುರಂದರ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಕಿರಿಯ ಎಂಜಿನಿಯರ್ ದಿವಾಕರ್, ದಾಸ್ತಾವೇಜು ಬರಹಗಾರ ಕೃಷ್ಣ ಮತ್ತಿತರರು ಇದ್ದರು.

Related posts

Leave a Reply