Header Ads
Breaking News

ಪುತ್ತೂರಿನಲ್ಲಿ ನಡೆಯಿತು ಪೊಲೀಸ್ ಕುಟುಂಬ ಸಮ್ಮಿಲನ

ಸಮಾಜದ ಸ್ವಾಸ್ತ್ಯ ಕಾಪಾಡಲು ಹಗಲಿರುಳೆನ್ನದೆ ದಿನಪೂರ್ತಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗಾಗಿ ಮತ್ತು ಅವರ ಕುಟುಂಬದ ಸಂತೋಷಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಉಪವಿಭಾಗದಲ್ಲಿ ಆಯೋಜಿಸುತ್ತಿರುವ ಕುಟುಂಬ ಸಮ್ಮಿಲನ ಕಾರ್ಯಕ್ರಮ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಮವಸ್ತ್ರದಲ್ಲೇ ಶಿಸ್ತನ್ನು ಕಾಪಾಡುತ್ತಿರುವ ಪೊಲೀಸರಿಗೆ ಒಂದು ದಿನ ಕಲರ್ ಡ್ರೆಸ್‍ನಲ್ಲಿ ಪೊಲೀಸ್ ಕುಟುಂಬ ಸಮೇತ ಸೇರುವ ಅವಕಾಶ ಲಭಿಸಿತ್ತು.

ಪುತ್ತೂರು ಪೊಲೀಸ್ ಉಪವಿಭಾಗಕ್ಕೆ ಸಂಬಂಧಿಸಿ ಪುತ್ತೂರು ನಗರ, ಸಂಚಾರ, ಮಹಿಳಾ,ಉಪ್ಪಿನಂಗಡಿ, ಕಡಬ, ಡಿವೈಎಸ್ಪಿ ಕಚೇರಿಯ ಪೆÇಲೀಸ್ ಆಧಿಕಾರಿಗಳು ಮತ್ತು ಸಿಬಂದಿಗಳು ತಮ್ಮ ಕುಟುಂಬ ಸಮ್ಮಿಲನದಲ್ಲಿ ಪಾಲ್ಗೊಂಡು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಕ್ರಮಗಳೊಂದಿಗೆ ಸಂಜೆ ಒಂದಷ್ಟು ಹೊತ್ತು ಹಬ್ಬವನ್ನು ಆಚರಿಸಿದರು.
ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೊಪಾಲ್ ನಾಯ್ಕ್, ಎಸ್ ಐ ಜಂಬೂರಾಜ್ ಮಹಾಜನ್, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮಗಳ ಬಳಿಕ ಕುಟುಂಬ ಸಹಭೋಜನ ನಡೆಯಿತು.

Related posts

Leave a Reply

Your email address will not be published. Required fields are marked *