Header Ads
Breaking News

ಪುತ್ತೂರಿನಲ್ಲಿ ನಸುಕಿನ ಜಾವ ಬೀಸಿದ ಗಾಳಿ-ಮಳೆ: ಮರವೊಂದು ಉರುಳಿ ವಿದ್ಯುತ್ ತಂತಿ, ಕಂಬಕ್ಕೆ ಹಾನಿ

ನಸುಕಿನ ಜಾವ ಜೋರಾಗಿ ಬೀಸಿದ ಗಾಳಿಗೆ ಕ್ಷಣದಲ್ಲಿ ಮರವೊಂದು ಉರುಳಿ ವಿದ್ಯುತ್ ತಂತಿ ಬಿದ್ದು ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ಒಂದು ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ ಬಾಗಿ ನಿಂತ ಘಟನೆ ಪುತ್ತೂರು ನಗರಸಭೆ ಕಚೇರಿ ಬಳಿ ನಡೆದಿದೆ.


ನಸುಕಿನ ಜಾವ ಭಾರಿ ಗಾಳಿ ಬೀಸಿದ್ದರಿಂದ ಸರಕಾರಿ ಆಸ್ಪತ್ರೆಗೆ ಹೋಗುವ ದಾರಿಯ ಪಕ್ಕದಲ್ಲಿದ್ದ ಮರವೊಂದು ಬುಡಸಮೇತ ಕಿತ್ತು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಪರಿಣಾಮ ಮರದ ಭಾರಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ಕಂಬವು ಮುರಿದು ಬಿದ್ದಿದೆ. ಅದರ ಪಕ್ಕದ ವಿದ್ಯುತ್ ಪರಿವರ್ತಕ ಮತ್ತು ಗ್ರಾಮಚಾವಡಿಯ ಬಳಿಯ ವಿದ್ಯುತ್ ಕಂಬ ಬೆಂಡಾಗಿದ್ದರೂ ನಗರಸಭೆ ಕಚೇರಿ ಎದುರಿನ ಕಂಬ ಮುರಿದು ಬಿದ್ದಿದೆ.
ಘಟನೆಯ ಕುರಿತು ನಗರಸಭೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ 24 ಗಂಟೆಯೂ ಕಾರ್ಯಚರಿಸುತ್ತಿರುವ ರಾತ್ರಿ ಪಾಲಯದಲ್ಲಿದ್ದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಘಟನೆ ಕುರಿತು ಮರ ತೆರವು ಮತ್ತು ವಿದ್ಯುತ್ ಕಂಬಗಳ ತೆರವು ಕುರಿತು ಮೆಸ್ಕಾಂ ಮತ್ತು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ.

Related posts

Leave a Reply