Header Ads
Header Ads
Breaking News

ಪುತ್ತೂರಿನಲ್ಲಿ ಫೆ.23, 24 ಹಾಗೂ 25ರಂದು ವಿವೇಕಾನಂದ ಕಾಲೇಜು ಆವರಣದಲ್ಲಿ ಕೃಷಿಯಂತ್ರ ಮೇಳ, ಕನಸಿನ ಮನೆ, ಹೈನುಗಾರಿಕೆ ಕಾರ್ಯಕ್ರಮ

ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ, ವಿವೇಕಾನಂದ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ 4ನೇ ಕೃಷಿಯಂತ್ರ ಮೇಳ-2019, ಕನಸಿನ ಮನೆ ಮತ್ತು ಹೈನುಗಾರಿಕೆ ಫೆ.23, 24 ಹಾಗೂ 25 ರಂದು ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಹೊಸ ಹೊಸ ಯಂತ್ರಗಳ ಆವಿಷ್ಕಾರವಾಗುತ್ತಿದೆ. ಇದರ ಮಾಹಿತಿಯನ್ನು ರೈತರಿಗೆ ತಲುಪಿಸುವುದು ಈ ಮೇಳದ ಯೋಜನೆಯಾಗಿದ್ದು, ಪ್ರಾತ್ಯಕ್ಷಿಕ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ. ಸುಮಾರು ಎರಡು ಲಕ್ಷ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈಗಾಗಲೇ ಯಂತ್ರ ಮೇಳಕ್ಕೆ ಸಂಬಂಧಿಸಿದಂತೆ 154 ಮಳಿಗೆಗಳು, ಕನಸಿನ ಮನೆಗೆ ಸಂಬಂಧಿಸಿದ 83 ಮಳಿಗೆಗಳು, ಎಂಟು ಅಟೋಮೊಬೈಲ್, ನಾಲ್ಕು ನರ್ಸರಿ, ನಾಲ್ಕು ಕೃಷಿ ನಿಯತಕಾಲಿಕೆಗಳು ಹಾಗೂ ಬೀಜ ಮಾರಾಟ ಮಳಿಗೆಗಳು, 20 ಆಹಾರ ಮತ್ತು 20 ವ್ಯಾಪಾರ ಹೀಗೆ ಒಟ್ಟು 266 ಮಳಿಗೆಗಳು ನೋಂದಾವಣೆಗೊಂಡಿದೆ ಎಂದರು.

ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಡ್ರೋನ್ ಮೂಲಕ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆ, ಸುಸಜ್ಜಿತ ಕಾರ್ಬನ್ ಫೈಬರ್ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ನೂತನವಾಗಿ ಆವಿಷ್ಕಾರಗೊಂಡ ಹೈನುಗಾರಿಕಾ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಸನ, ವಿವಿಧ ಮೇವಿನ ತಳಿಗಳ ಪ್ರದರ್ಶನ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ, ಮಾರಾಟ ಮುಂತಾದವುಗಳು ಒಳಗೊಂಡಿವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಎಂ.ಕೆ.ಕೃಷ್ಣ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ಕಾರ್ಯಕ್ರಮ ಕೋ ಓರ್ಡಿನೇಟರ್ ವಿವೇಕ್ ರಂಜನ್ ಭಂಡಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *