Header Ads
Header Ads
Breaking News

ಪುತ್ತೂರಿನಲ್ಲಿ “ಮೇಘ ಕಲಾ ಆರ್ಟ್ಸ್” ಶುಭಾರಂಭ

ಪುತ್ತೂರು : ಸಾಮಾಜಿಕ ಬದ್ಧತೆಯಲ್ಲಿ ಸಮಾಜಕ್ಕೆ ಪೂರಕವಾದ ಕೆಲಸ ಮಾಡುತ್ತಾ ಕಲೆಯನ್ನು ಉಳಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಮೇಘ ಕಲಾ ಆರ್ಟ್ಸ್ ಸಂಸ್ಥೆಯನ್ನು ಹುಟ್ಟುಹಾಕಿ ಬೆಳೆಯುತ್ತಿರುವ ಪುತ್ತೂರು ಪಟ್ಟಣದಲ್ಲಿ ಸಾಂಸ್ಕೃತಿಕ ವಾತಾವರಣ ಉಂಟು ಮಾಡುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ ಹೇಳಿದರು.ಅವರು ಗುರುವಾರ ದರ್ಬೆ ಅಕ್ಷಯ ಕಾಂಪ್ಲೆಕ್ಸ್‌ನಲ್ಲಿ ನೂತನ ಸಂಸ್ಥೆಯ ಮೇಘ ಕಲಾ ಆರ್ಟ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಥೆಯ ಮುಖಾಂತರ ಹಲವಾರು ಕಲಾವಿದರಿಗೆ ಸಾಂಸ್ಕೃತಿಕ ಹಿನ್ನಲೆಯ ವೇಷ ಭೂಷಣ ಮುಂತಾದ ಪರಿಕರಗಳನ್ನು ಒದಗಿಸುವ ಮೂಲಕ ಮತ್ತಷ್ಟು ಕಲಾವಿದರಿಗೆ ವೇದಿಕೆ ಅವಕಾಶವನ್ನು ಒದಗಿಸಿಕೊಡುವ ಸಂಸ್ಥೆಯ ಗ್ರಾಹಕರ ವಿಶ್ವಾಸ ಪಡೆದು ಎತ್ತರಕ್ಕೆ ಬೆಳೆಯಲಿ ಎಂದರು.ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ಕಾನ ಶಿವಶಂಕರ ಫ್ಯೂಯಲ್ ಸರ್ವಿಸಸ್‌ನ ಉದಯ ನಾರಾಯಣ ಮಾತನಾಡಿ, ಪ್ರಸ್ತುತ ಯುವಜನತೆ ಪಾಶ್ಚಿಮಾತ್ ಕಲೆಗಳಿಗೆ ಮಾರುಹೋಗಿ ಸಂಸ್ಕೃತಿಯ ಉಳಿವಿಗೆ ಮಾರಕ ಎನಿಸಿದ್ದರೂ, ಸಾಂಸ್ಕೃತಿಕ ಮೌಲ್ಯ, ಕಲೆಗಳಿಂದ ನಮ್ಮ ಭಾರತ ಪ್ರಸ್ತುತ ಉಳಿದಿದೆ. ಮುಂದಿನ ಪೀಳಿಗೆಗೆ ಭಾರತೀಯ ಕಲೆಗಳನ್ನು ಹಸ್ತಾಂತರಿಸುವ ಕೆಲಸ ಪೋಷಕರ ಜವಾಬ್ದಾರಿ.

ಈ ನಿಟ್ಟಿನಲ್ಲಿ ಕಲೆ ಸಾಮಾಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಇಂದು ಉದ್ಘಾಟನೆಗೊಂಡ ಸಂಸ್ಥೆ ಯಶಸ್ವಿಯಾಗಲಿ ಎಂದರು.ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಸಂಸ್ಥೆಯ ಮುಖಾಂತರ ಕಲೆ ಬೆಳಗಿಸುವ ಮೂಲಕ ಕಲೆಯನ್ನು ಉಳಿಸುವಂತಾಗಲಿ ಎಂದರು.ಮಾತೃಶ್ರೀ ಚಂದ್ರಾವತಿ ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಪದಡ್ಕ ವಿಶ್ವಕಲಾನಿಕೇತನದ ನಯನಾ ವಿ.ರೈ ಕುದ್ಕಾಡಿ ಅಧ್ಕಕ್ಷತೆ ವಹಿಸಿದ್ದರು. ಸತೀಶ್ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಬಂಟಸಿರಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು, ಮಹಾಭಾರತ ಖ್ಯಾತಿ ಬಾಲನಟ ಮಾ.ಅತೀಶ್ ಎನ್.ಶೆಟ್ಟಿ, ಚಲನಚಿತ್ರ ನಟಿ, ನಿರೂಪಕಿ ಕಿ.ಪೂರ್ವಿ ಕೆ.ರಾವ್, ಮುನ್ನೂರೊಕ್ಲು ಕಲಾಮಯ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧೀರ್ ಏನೆಕಲ್ಲು, ಉದ್ಯಮಿ, ಚಲನಚಿತ್ರ ನಟ ಸಂದೀಪ್ ಕರ್ಕೇರಾ, ಕಾಂಪ್ಲೆಕ್ಸ್ ಮಾಲಕ ದಿವಾಕರ ರೈ ಜಾಲ್ನೂರು, ಪುನೀತ್ ಆರ್ಕೆಸ್ಟ್ರಾದ ಚಂದ್ರಶೇಖರ ಹೆಗ್ಡೆ ಶುಭ ಹಾರೈಸಿದರು. ಸಂಸ್ಥೆಯ ಮಾಲಕಿ ಶಾರದಾ ದಾಮೋದರ ಆರತ್ತೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೃಷ್ಣರಾಜ್ ಸುಳ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply