Header Ads
Header Ads
Breaking News

ಪುತ್ತೂರಿನಲ್ಲಿ ಮೇಳೈಸಿದ ಭಜನಾ ಪಂತೊ-2018

ಪುತ್ತೂರು ಒಡಿಯೂರು ವಜ್ರಮಾತಾ ಮಹಿಳಾ ಘಟಕದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತಾಲೂಕು ಸಾಹಿತ್ಯ ಸಮ್ಮೇಳನ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದಲ್ಲಿ ತುಳು ಭಜನಾ ಸ್ಪರ್ಧೆ “ತುಳು ಭಜನಾ ಪಂತೋ-2018” ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಿತು.ನ.3 ರಂದು ಸುದಾನ ಶಾಲಾ ವಠಾರದಲ್ಲಿ ನಡೆಯಲಿರುವ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಭಜನಾ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಉದ್ಘಾಟಿಸಿದರು.ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಂಪ್ರದಾಯಿಕ ರೀತಿಯಲ್ಲಿ ಹಿಂಗಾರ ಅರಳಿಸಿದರು. ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ. ಸಭಾ ಕಾರ್ಯಕ್ರಮದ ಬಳಿಕ ತುಳು ಭಜನಾ ಸ್ಪರ್ಧೆ ನಡೆಯಿತು. ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ ಸಮಾರೋಪ ಭಾಷಣ ಮಾಡಿ, ಹಿಂದೆ ಕೂಟುಕುಟುಂಬ ಪದ್ಧತಿ ಇರುವ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಗೋಧೋಳಿ ಹೊತ್ತಿನಲ್ಲಿ ಭಜನೆಗಳು ನಡೆಯುತ್ತಿತ್ತು. ಆದರೆ ಪ್ರಸ್ತುತ ಎರಡು ಮಕ್ಕಳು ಸಾಕು, ಒಂದು ಬೇಕು ಎಂಬ ಭಾನವೆಯಿಂದ ಕೂಟುಕುಟುಂಬ ಮರೆಯಾಗಿ ಭಜನೆ ಎಂಬುದು ಮರೆಯಾಗಿದೆ. ತುಳುನಾಡ ಸಂಸ್ಕøತಿಯನ್ನು ಉಳಿಸುವ ಭಜನೆ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆದು ಬರಲಿ. ಇದಕ್ಕೆ ಇಂತಹಾ ಸ್ಪರ್ಧಾ ಕಾರ್ಯಕ್ರಮಗಳು ಪ್ರೇರಣೆ ನೀಡಲಿದೆ ಎಂದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ತುಳು ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು ವಜ್ರಮಾತಾ ಮಹಿಳಾ ಘಟಕದ ಅಧ್ಯಕ್ಷೆ, ತುಳು ಸಾಹಿತ್ಯ ಸಮ್ಮೇಳನದ ಮಹಿಳಾ ಕೂಟದ ಸಂಚಾಲಕಿ ನಯನಾ ರೈ, ತುಳು ಸಾಹಿತ್ಯ ಸಮ್ಮೇಳನದ ಸತ್ಕಾರ ಕೂಟದ ಸದಸ್ಯೆ, ನಗರಸಭೆ ಸದಸ್ಯೆ ಗೌರಿ ಬನ್ನೂರು, ಪ್ರಗತಿ ಪರ ಕೃಷಿಕೆ ಕೃಷ್ಣವೇಣಿ ಕರುಣಾಕರ ರೈ,ವಜ್ರಮಾತಾ ಮಹಿಳಾ ಘಟಕದ ಕಾರ್ಯದರ್ಶಿ ಶಾರದಾ ಕೇಶವ್ ., ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ , ಸಮ್ಮೇಳನದ ಸಹ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟಿ,್ಟಜತೆಕಾರ್ಯದರ್ಶಿ ಪ್ರೇಮಲತಾ ರಾವ್ ಉಪಸ್ಥಿತರಿದ್ದರು. .

Related posts

Leave a Reply