
ಚಚ್ಚು ಮದ್ದಿನ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಮೊದಲ ಲಸಿಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಹರೀಶ್ ಹಾಕಿಸಿಕೊಂಡಿದ್ದಾರೆ. ಒಟ್ಟು 72 ಮಂದಿ ಲಸಿಕೆ ಹಾಕಿಸಿಕೊಳ್ಳಲು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಮೊದಲು ಲಸಿಕೆ ಹಾಕಿಸಿಕೊಂಡ ಆರೋಗ್ಯ ಮಿತ್ರ ಹರೀಶ್ ಮಾತನಾಡಿ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆಗಿಲ್ಲ. ಚಚ್ಚುಮದ್ದು ಹಾಕುವಾಗಲೂ ಯಾವುದೇ ನೋವಾಗಿಲ್ಲ. ತಲೆನೋವು ಸೇರಿದಂತೆ ಯಾವುದೇ ದುಷ್ಟಪಿರಣಾಮ ಬೀರಿಲ್ಲ. ಎಲ್ಲರೂ ಯಾವುದೇ ಅಂಜಿಕೆಯಲ್ಲದೇ ಲಸಿಕೆ ಪಡೆದುಕೊಳ್ಳಬಹುದು ಎಂದು ಭರವಸೆ ನೀಡಿದ್ರು.