Header Ads
Breaking News

ಪುತ್ತೂರಿನಲ್ಲಿ ವರ್ಗಾವಣೆಗೊಂಡ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು: ಪೊಲೀಸ್ ಕರ್ತವ್ಯ ಎಂದ ಮೇಲೆ ಕೆಲಸ ಹೆಚ್ಚಿರುತ್ತದೆ. ಈ ನಡುವೆ ಸಿಬ್ಬಂದಿಗಳು ಆರೋಗ್ಯ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಿ ಎಂದು ಪುತ್ತೂರು ಉಪವಿಭಾಗದ ಎ.ಎಸ್ಪಿ ಲಕನ್ ಸಿಂಗ್ ಯಾದವ್ ಹೇಳಿದರು. ಸಂಚಾರ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿದ್ದು ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡ ಚೆಲುವಯ್ಯ, ಕಡಬ ಠಾಣೆಗೆ ವರ್ಗಾವಣೆಗೊಂಡ ವಿಠಲ ಜೋಗಣ್ಣ, ಪದ್ದೋನ್ನತಿ ಹೊಂದಿ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡ ಜಗನ್ನಾಥ ಅವರಿಗೆ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಭವನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಮೂವರನ್ನು ಸನ್ಮಾನಿಸಿ ಮಾತನಾಡಿದರು. ಪೊಲೀಸ್ಇಲಾಖೆಯಲ್ಲಿ ಕರ್ತವ್ಯದ ಜೊತೆಗೆ ಜವಾಬ್ದಾರಿ ಇದೆ. ಅದನ್ನು ನಿಭಾಯಿಸುವ ವೇಳೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭ ವರ್ಗಾವಣೆಗೊಂಡ ಪೊಲೀಸರು ತಮ್ಮ ಹಂಚಿಕೊಂಡರು. ಈ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ಠಾಣೆಯ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್, ಎಸ್.ಐ ಜಂಬುರಾಜ್ ಮಹಾಜನ್, ಎ.ಎಸ್.ಐ ಸುರೇಶ್ ಶರ್ಮ, ಹೆಡ್‍ಕಾನಸ್ಟೇಬಲ್ ಸ್ಕರೀಯ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *