Header Ads
Header Ads
Header Ads
Breaking News

ಪುತ್ತೂರಿನಲ್ಲಿ 15 ನೇ ದಸರಾ ಉತ್ಸವಕ್ಕೆ ಚಾಲನೆ ನವದುರ್ಗೆಯರ ಪ್ರತಿಷ್ಠಾಪನೆ 1008 ತೆಂಗಿನಕಾಯಿಯ ಚಕ್ರಪೂಜೆ ನೆರವೇರಲಿದೆ

ನಾಡಿನೆಲ್ಲೆಡೆ ಇಂದು ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಪುತ್ತೂರು ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯುವ 15 ನೇ ದಸರಾ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಕಳೆದ 15 ವರ್ಷಗಳಿಂದು ಪುತ್ತೂರು ದಸರಾವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

 

ರಾಜ್ಯದಲ್ಲಿ ಮಂಗಳೂರು ದಸರಾವನ್ನು ಬಿಟ್ಟರೆ ಪುತ್ತೂರು ದಸರಾದಲ್ಲಿ ಮಾತ್ರ ನವದುರ್ಗೆಯರ ವಿಗ್ರಹವನ್ನು ಪ್ರತಿಷ್ಟಾಪಿಸಿ ಬಳಿಕ ಅದನ್ನು ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ. ಮಂಗಳೂರಿನ ದಸರಾ ವೈಭವನ್ನು ಮಾದರಿಯಾಗಿಟ್ಟುಕೊಂಡು ಕಳೆದ 15 ವರ್ಷಗಳ ಹಿಂದೆ ಆರಂಭಗೊಂಡ ಪುತ್ತೂರು ದಸರಾ ಕ್ಕೆ ಇಂದು ಜಿಲ್ಲೆಯ ಹಲವೆಡೆಗಳಿಂದ ಜನ ಬಂದು ವೀಕ್ಷಿಸುತ್ತಾರೆ. ಈ ಬಾರಿ ವಿಶೇಷವಾಗಿ ದಸರಾ ಮಹೋತ್ಸವದ ಪ್ರಯುಕ್ತ 1008 ತೆಂಗಿನಕಾಯಿಯ ಚಕ್ರಪೂಜೆಯನ್ನೂ ನೆರವೇರಿಸಲಾಗುತ್ತದೆ.

Related posts

Leave a Reply