Header Ads
Breaking News

ಪುತ್ತೂರಿನಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕಾರ್ಯಕ್ರಮ

ಕಾನೂನುಗಳಿಂದ ಮಾತ್ರ ಅಪಘಾತ ತಡೆಯಲು ಆಗದು. ಪ್ರತಿಯೊಬ್ಬ ವಾಹನ ಸವಾರ ನನ್ನ ಜೀವ ಮತ್ತು ಇನ್ನೊಬ್ಬನ ಜೀವದ ಮಹತ್ವದ ಬಗ್ಗೆ ಸ್ವಯಂ ಜಾಗೃತಿ ಹೊಂದಿದಾಗ ಮಾತ್ರ ಅಪಘಾತ ಪ್ರಮಾಣ ನಿಯಂತ್ರಿಸಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಇದರ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಉದ್ಧಾಟಿಸಿ ಅವರು ಮಾತನಾಡಿದರು. ಕೋವಿಡ್‍ಗಿಂತಲು ಅಪಘಾತದಿಂದ ಉಂಟಾದ ಸಾವಿನ ಸಂಖ್ಯೆ ಹೆಚ್ಚು ಅನ್ನುವುದನ್ನು ಕಳೆದ ಮೂರು ತಿಂಗಳ ಅಂಕಿ ಅಂಶ ತೆರೆದಿಟ್ಟಿದೆ. ಹೀಗಾಗಿ ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರಲ್ಲು ಜಾಗೃತಿ ಮೂಡಿಸುವ ನಿಟ್ಟಿಲ್ಲಿ ರಸ್ತೆ ಸುರಕ್ಷತಾ ಮಾಸ ವೇದಿಕೆಯಾಗಬೇಕು ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ತಾ.ಪ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್,ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಡಿವೈಎಸ್‍ಪಿ ಗಾನಾ ಪಿ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಕಾವೂರು ಯಕ್ಷಪೂರ್ವ ಕಲಾಕೇಂದ್ರದ ಸದಸ್ಯರಿಂದ ಸುರಕ್ಷಾ ವಿಜಯ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

Related posts

Leave a Reply

Your email address will not be published. Required fields are marked *