Header Ads
Header Ads
Header Ads
Breaking News

ಪುತ್ತೂರಿನಲ್ಲೂ ಎಬಿವಿಪಿ ಪ್ರತಿಭಟನೆ ವಿವಿಗಳಿಗೆ ಕುಲಪತಿ ನೇಮಕಕ್ಕೆ ಆಗ್ರಹ

 

ರಾಜ್ಯದ ಕಾನೂನು ವಿಶ್ವ ವಿದ್ಯಾಲಯ ಹಾಗೂ ರಾಜ್ಯದ ಅನೇಕ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಬೇಕು. ಈ ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಗೊಂದಲಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ವಿವೇಕಾನಂದ ಕಾನೂನು ಕಾಲೇಜಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪುತ್ತೂರು ಘಟಕದ ವತಿಯಿಂದ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಬಿವಿಪಿಯ ತಾಲೂಕು ಸಹಸಂಚಾಲಕ ಶಾಶ್ವತ್ ಶೆಟ್ಟಿ ಮಾತನಾಡಿ, ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಮೌಲ್ಯಮಾಪನ ಹಾಗು ಮರುಮೌಲ್ಯಮಾಪನದಲ್ಲಿ ಅಕ್ರಮಗಳು ನಡೆಯುತ್ತಿವೆ. ವಿವಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ. ರಾಜ್ಯದ ವಿವಿಗಳಲ್ಲಿ ಶೇ ೫೦ ರಷ್ಟು ಉಪನ್ಯಾಸಕ ಹುದ್ದೆಗಳು ಖಾಲಿಯಾಗಿವೆ. ಹೀಗಾದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ ನ್ನು ಕಟ್ಟಕೊಳ್ಳುವುದು ಸಾಧ್ಯವಿಲ್ಲ ಎಂದು ಅವ್ರು ಪ್ರಶ್ನಿಸಿದ್ರು.ಈ ವೇಳೆ ಎಬಿವಿಪಿ ನಗರ ಕಾರ್ಯದರ್ಶಿ ಹೃಷಿಕೇಶ್ ಶೆಟ್ಟಿ, ವಿಜೇತ್, ರಂಜಿತ್, ಜಯಾನಂದ, ಮಹೇಶ್ ಮತ್ತಿತರರು ಭಾಗವಹಿಸಿದ್ದರು

Related posts

Leave a Reply