Header Ads
Breaking News

ಪುತ್ತೂರಿನಾದ್ಯಂತ ಬಿರುಸುಗೊಂಡ ಮಳೆ ಮಳೆಯ ಅಬ್ಬರಕ್ಕೆ ಅಪಾರ ಹಾನಿ

ಪುತ್ತೂರು ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಸುರಿಯಲಾರಂಭಿಸಿದ ಬಾರೀ ಮಳೆ ಶನಿವಾರವೂ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರವೊಂದು ಬಿದ್ದು ಹಾನಿ ಸಂಭವಿಸಿದೆ. ಅಲ್ಲದೆ ಈಶ್ವರಮಂಗಲ ಹನುಮಗಿರಿ ಸಮೀಪ ಬೃಹತ್ ಮರವೊಂದು ಈಶ್ವರಮಂಗಲ-ಪಡುಮಲೆ ರಸ್ತೆಗೆ ಅಡ್ಡವಾಗಿ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಬೆಟ್ಟಂಪಾಡಿ ಗ್ರಾಮದ ಕೂವೆಂಜ ಎಂಬಲ್ಲಿ ಬಾಬು ಮೇರ ಎಂಬವರ ಮನೆಗೆ ಪಕ್ಕದಲ್ಲಿದ್ದ ಮರವೊಂದು ಮುರಿದು ಬಿದ್ದು ಮನೆಯ ಮಾಡು ಸಂಪೂರ್ಣ ನಾಶವಾಗಿದ್ದು, ರೂ.20 ಸಾವಿರದಷ್ಟು ನಷ್ಟ ಸಂಭವಿಸಿರಬುದೆಂದು ಅಂದಾಜಿಸಲಾಗಿದೆ.

 

 

Related posts

Leave a Reply