Header Ads
Header Ads
Breaking News

ಪುತ್ತೂರಿನ ಆಕರ್ಷಣೆಯಾಗಲಿದೆ ’ಆಂಪಿ ಥಿಯೇಟರ್’

ಪುತ್ತೂರು : ನಗರದ ಅತೀ ಎತ್ತರದ ಪ್ರದೇಶ, ಮುಂದೆ ಪ್ರವಾಸಿ ತಾಣವಾಗಿ ಹೊರಹೊಮ್ಮಲಿರುವ ಬೀರಮಲೆ ಬೆಟ್ಟದಲ್ಲಿ “ಆಂಪಿ ಥಿಯೇಟರ್ ನಿರ್ಮಾಣಗೊಳ್ಳುವ ಮೂಲಕ ಮಕ್ಕಳಿಂದ ಹಿಡಿದು ಎಲ್ಲರ ಆಕರ್ಷಕ ತಾಣವಾಗಿ ಪರಿಣಮಿಸಲಿದೆ.ಈಗಾಗಲೇ2017-18ನೇ ಸಾಲಿನಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯ ಶೇ75 ರಷ್ಟು ಪೂರ್ಣಗೊಂಡಿದ್ದು, ಮಕ್ಕಳಿಗಾಗಿ “ಆಂಪಿ ಥಿಯೇಟರ್” ನಿರ್ಮಿಸುವ ನಿಟ್ಟಿನಲ್ಲಿ ಎರಡನೇ ಹಂತದ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ.ಈ “ಆಂಪಿ ಥಿಯೇಟರ್” ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆವನ್ನು ಈಗಾಗಲೇ ಕಳುಹಿಸಲಾಗಿದೆ. ಇದನ್ನು ನಿರ್ಮಾಣ ಮಾಡುವ ಮೂಲಕ ಇನ್ನು ಬೀರಮಲೆ ಬೆಟ್ಟ ಕೇಂದ್ರ ಬಿಂದುವಾಗಿ ಪರಿಣಮಿಸಲಿದೆ.ಇಡೀ ಪುತ್ತೂರು ಪೇಟೆಯನ್ನು ಸೆರೆಹಿಡಿಯಬಲ್ಲ ಬೀರಮಲೆ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ನಿರ್ಮಿಸಲು ಬೆಟ್ಟ ಮೇಲ್ಭಾಗದಲ್ಲಿ 14ಎಕ್ರೆ ಗೋಮಾಳ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇಲ್ಲಿ ಕಾಡು ನಿರ್ಮಿಸುವುದು, ವಾಯುವಿಹಾರಕ್ಕೆ, ವಾಕಿಂಗ್‌ಗೆ ಒಟ್ಟಾರೆಯಾಗಿ ಅರಣ್ಯ ಪರಿಸರದ ಟಚ್ ನೀಡುವುದು ಪ್ರಮುಖ ಅಂಶವಾಗಿದ್ದು, ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅರಣ್ಯ ಇಲಾಖೆ ಮುತುವರ್ಜಿಯಲ್ಲಿ ಒಂದು ಕಾಲು ಕೋಟಿ ಅನುದಾನ ಮುಂದಿನ ಐದು ವರ್ಷಗಳ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗಿದೆ. ಮೊದಲ ಹಂತ ೩೦ ಲಕ್ಷ ರೂಪಾಯಿ ಈಗಾಗಲೇ ಮಂಜೂರುಗೊಂಡಿದ್ದು, ಈ ನಡುವೆ ಹೆಚ್ಚುವರಿ 11.5 ಲಕ್ಷ ರೂ.ಗಳನ್ನು ಮಂಜೂರುಗೊಳಿಸಿದೆ. ಒಟ್ಟು41.50 ಲಕ್ಷ ರೂ. ವೆಚ್ಚದಲ್ಲಿ ಸ್ವಾಗತ ದ್ವಾರ, ಟಿಕೇಟ್ ಕೌಂಟರ್, ಚೈನ್ ಲಿಂಕ್ ಬೇಲಿ, ಮುಳ್ಳುತಂತಿ ಬೇಲಿ ಹಾಗೂ ವಾಕಿಂಗ್ ಪಾಥ್, ಪೆರಾಗೋಲ, ಕುಳಿತುಕೊಳ್ಳಲು ಕಟ್ಟೆ, ಬೋರ್‌ವೆಲ್,700 ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಪ್ರತೀ ಜಿಲ್ಲೆಗೊಂದು ಸಾಲುಮರದ ತಿಮ್ಮಕ್ಕ ವೃಕ್ಷೆದ್ಯಾನ ನಿರ್ಮಾಣ ಆಗುತ್ತಿದ್ದು, ಅದರಂತೆ ಕರಾವಳಿ ಜಿಲ್ಲೆಯ ತಾಲೂಕಿಗೊಂದರಂತೆ ವೃಕ್ಷೆದ್ಯಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ವೃಕ್ಷೆದ್ಯಾನ ನಿರ್ಮಾಣ ಭರದಿಂದ ಸಾಗುತ್ತಿದೆ.
     
ಎರಡನೇ ಹಂತದ ಯೋಜನೆ : ಎರಡನೇ ಹಂತದ ಯೋಜನೆಯಲ್ಲಿ ಸುಮಾರು30 ಲಕ್ಷ ರೂಪಾಯಿಯನ್ನು ಮುಂದಿನ ಒಂದು ವರ್ಷದ ಯೋಜನೆಯಾಗಿ ತೆಗೆದುಕೊಂಡು ಆಂಪಿ ಥಿಯೇಟರ್, ಸೂರ್ಯಾಕಾರದ ಫ್ಲಾಟ್‌ಫಾರಂ, ಫ್ಯಾಮಿಲಿಗೆ ಕುಳಿತುಕೊಳ್ಳಲು ಅಣಬೆ ಆಕೃತಿಯಲ್ಲಿ ಸಿಟ್‌ಔಟ್, ಈಗಿರುವ ಮಕ್ಕಳ ಆಟದ ಪಾರ್ಕ್‌ನ್ನು ಸಂಪೂರ್ಣ ಕೆಡವಿ ಹೊಸ ಪಾರ್ಕ್ ರಚಿಸುವುದು, ಜತೆಗೆ500 ವಿವಿಧ ಔಷಧೀಯ ಗಿಡಗಳನ್ನು ನೆಡುವುದು, ಫಾರೆಸ್ಟ್ ಒಳಗಡೆ ಟ್ರಕಿಂಗ್ ಪಾರ್ಕ್ ನಿಮಾರ್ಣ ಮುಂತಾದ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗುವುದು. ಅಲ್ಲದೆ ಕಾಂಕ್ರಿಟ್ ಬೆಂಚ್, ಸ್ವಚ್ಛತೆಗಾಗಿ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗುವುದು. ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗ್ರಂಥಾಲಯ ಕಟ್ಟಡವನ್ನು ಹೊಸ ಮಾದರಿಯಲ್ಲಿ ದುರಸ್ತಿಗೊಳಿಸಲಾಗಿದ್ದು, ಇದನ್ನು ಮಾಹಿತಿ ಕೇಂದ್ರವಾಗಿ ಬಳಸಲಾಗುವುದು. ಈ ಮಾಹಿತಿ ಕೇಂದ್ರಕ್ಕೆ ೩ಡಿ ಲೈಟ್ ಅಳವಡಿಸಿ ವಿವಿಧ ಬಗೆಯ ಔಷಧೀಯ ಸಸ್ಯಗಳು, ಪ್ರಾಣಿಗಳು, ಸಿನೆಮಾ ಮಯಂತಾದವುಗಳ ಕುರಿತು ಮಾಹಿತಿಯನ್ನು ನೀಡಲಾಗುವುದು. ಏನಿದು “ಆಂಪಿ ಥಿಯೇಟರ್” ಎನ್ನುವುದು ಗ್ರೀಕ್ ಪದ. ಇದರ ಅರ್ಥ ಬಯಲು ಮಂಟಪ. ಇದನ್ನು ಬಿರುಮಲೆ ಗುಡ್ಡದಲ್ಲಿ ಮಕ್ಕಳಿಗಾಗಿ ನಿರ್ಮಿಸುವ ಕಾರಣ,30 ಮಕ್ಕಳು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇಡಲಾಗುವುದು. ನಡುವಿನಲ್ಲಿ ಸ್ಟೇಡಿಯಂ, ಸುತ್ತ ಕುಳಿತುಕೊಳ್ಳಲು ಆಸನ. ಮುಖ್ಯವಾಗಿ ಕಾಂಕ್ರೀಟ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಎಂಬಂತೆ ಮಣ್ಣಿನ ಕಲ್ಲುಗಳನ್ನು ಬಳಸಿ ನಿರ್ಮಾಣ ಕಾರ್ಯ ಮಾಡಲಾಗುವುದು. ನೈಸರ್ಗಿಕ ವಸ್ತುಗಳಿಂದಲೇ ಆಂಪಿ ಥಿಯೇಟರ್ ಹಾಗೂ ಇತರ ಕೆಲಸಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಮಕ್ಕಳ ಬರ್ತ್‌ಡೇ ಪಾರ್ಟಿ, ಅಂಗನವಾಡಿಗಳ ವಾರ್ಷಿಕೋತ್ಸವ, ವಾರದ ಸಾಂಸ್ಕೃತಿಕ ಕಾರ್ಯಕ್ರಮ, ಕೌಟುಂಬಿಕ ಮನರಂಜನೆಗಾಗಿ ಈ ಆಂಪಿ ಥಿಯೇಟರನ್ನು ಬಳಸಿಕೊಳ್ಳಬಹುದು. ಒಟ್ಟಾರೆಯಾಗಿ ಅರಣ್ಯದ ಅನುಭವ ಈ ಥಿಂಯೇಟರ್‌ನಲ್ಲಿ ಆಗಬೇಕೆಂಬ ನಿಟ್ಟಿನಲ್ಲಿ ನಿರ್ಮಾಣ ಕಾರ್ಯ ಆಗಲಿದೆ.

Related posts

Leave a Reply