Breaking News

ಪುತ್ತೂರಿನ ಇಚ್ಲಂಪಾಡಿ ಚರ್ಚ್‌ನಲ್ಲಿ ನಡೆದ ದರೋಡೆ ಪ್ರಕರಣ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಆರೋಪಿ

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಗ್ರಾಮದ ದೊಡ್ಡ ಚರ್ಚ್‌ನಲ್ಲಿ ಜುಲೈ ೧೦ರಂದು ರಾತ್ರಿ ದರೋಡೆಕೋರ ದರೋಡೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ನೀತಿ ತಂಡದ ಸದ್ಯಸರಾದ ಮೇಹಿ ಜಾರ್ಜ್ ಚರ್ಚಿನ ಕಮಿಟಿಯ ಅನುಮತಿಯೊಂದಿಗೆ ಕ್ಯಾಮರಾಗಳಲ್ಲಿ ಸೆರೆಸಿಕ್ಕಿದ ಕಳ್ಳನ ಪೋಟೋಗಳನ್ನು ನೀತಿ ತಂಡಕ್ಕೆ ನೀಡಿದ್ದಾರೆ. ಅದರಂತೆ ಮಾಹಿತಿಯನ್ನು ಬರೆದು ನೀತಿ ತಂಡದ ಎಲ್ಲ ಗ್ರೂಪ್‌ಗೆ ಕಳುಹಿಸಲಾಗಿತ್ತು. ಕಡಬ ನೀತಿ ಗ್ರೂಪಿನ ಕೊಡಿಯಾಂಬಳ ಪ್ರಕಾಶ್ ಅವರಿಗೆ ಉಜಿರೆಯಿಂದ ಪೋನ್ ಮಾಡಿ ಕಳ್ಳ ಉಜಿರೆ ಸ್ವಾಗತ್ ಹೋಟೆಲ್ ಪಕ್ಕದ ಹೋಟೆಲ್ ನಲ್ಲಿ ಇದ್ದನೆಂದು ಮಾಹಿತಿಯನ್ನು ನೀಡಿದ್ದಾರೆ.
ಅದರಂತೆ ಪ್ರಕಾಶ್ ಹಾಗೂ ಮೇಹಿ ಕಡಬ ಠಾಣೆಗೆ ಮಾಹಿತಿ ನೀಡಿ ಪೋಲಿಸರ ಸಹಾಯದೊಂದಿಗೆ ಉಜಿರೆ ಹೋಗಿ ಅವನ ಮನೆಯನ್ನು ಜಪ್ತಿ ಮಾಡಿದ್ದಾರೆ.
ಇನ್ನು ಆರೋಪಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕೃತ್ಯಕ್ಕೆ ಬಳಸಿದ ಉಪಕರಣಗಳು ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ.

ಅನೀಶ್ ಪುತ್ತೂರು

Related posts

Leave a Reply