Header Ads
Breaking News

ಪುತ್ತೂರಿನ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿ ನೇಣು ಬಿಗಿದು ಪಂಚಾಯಿತಿ ಸಿಬ್ಬಂದಿ ಆತ್ಮಹತ್ಯೆ

ಪುತ್ತೂರು ತಾಲ್ಲೂಕಿನ ಕಬಕ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಚತಾ ನಿರ್ವಹಣೆ ಮತ್ತು ನೀರಿನ ಬಿಲ್ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ತನ್ನ ಹಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿ ನಡೆದಿದೆ. ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಹರೀಶ್ ಗಟ್ಟಿ (53) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ಬೆಳಿಗ್ಗೆ ಕಬಕ ಗ್ರಾಮ ಪಂಚಾಯಿತಿಗೆ ಹೋಗಿದ್ದ ಹರೀಶ್ ಗಟ್ಟಿ ಅವರು ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಬರುವುದಾಗಿ ಹೇಳಿ ಅಲ್ಲಿಂದ ಬಂದವರು ತನ್ನ ಹೊಸಮನೆಯ ಸಮೀಪವಿರುವ ಹಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯವ್ಯಸನಿಯಾಗಿದ್ದ ಹರೀಶ್ ಗಟ್ಟಿ ಅವರು ಸರಿಯಾಗಿ ಗ್ರಾಮ ಪಂಚಾಯಿತಿಯ ಕೆಲಸಕ್ಕೆ ಹೋಗದ ಹಿನ್ನಲೆಯಲ್ಲಿ ಕಬಕ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅವರನ್ನು ಸ್ವಲ್ಪ ದಿನಗಳ ಕಾಲ ಕೆಲಸದಿಂದ ಬಿಡುಗಡೆಗೊಳಿಸುವುದು ಮತ್ತು ಅವರನ್ನು ಮದ್ಯವರ್ಜನಾ ಶಿಬಿರ ಇಲ್ಲವೇ ಆಸ್ಪತ್ರೆಗೆ ದಾಖಲಿಸಿ, ಮದ್ಯಮುಕ್ತರಾದ ಬಳಿಕ ಕೆಲಸಕ್ಕೆ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಲಾಗಿತ್ತು. ವಿಪರೀತ ಕುಡಿತದ ಚಟವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *