Header Ads
Header Ads
Breaking News

ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆ- ಅಧ್ಯಯನ ಹಾಗೂ ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ರಸ್ತೆ ಸಂಚಾರ ಎಂಬುದು ಸಾರ್ವಜನಿಕ ವಿಚಾರ. ಎಲ್ಲರೂ ರಸ್ತೆಗಳ ಬಳಕೆದಾರರು. ಇಲ್ಲಿನ ಸುರಕ್ಷತೆ ಎಲ್ಲರ ಬಾಧ್ಯತೆಯಾಗಬೇಕು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕೆಲವೊಂದು ಉಪಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಸಮಸ್ಯೆ ನಿವಾರಿಸಲು ಮುಂದಾಗಿದೆ. ಇದಕ್ಕೆ ಸಾರ್ವಜನಿಕರು ಮತ್ತು ಸಂಬಂಧಪಟ್ಟ ಎಲ್ಲರ ಸಹಕಾರ ಅಗತ್ಯ ಎಂದವರು ನುಡಿದರು.ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪುತ್ತೂರು ನಗರವೊಂದರಲ್ಲೇ 1200ಕ್ಕಿಂತಲೂ ಅಧಿಕ ಆಟೊ ರಿಕ್ಷಾಗಳಿವೆ. ಗ್ರಾಮಾಂತರದಲ್ಲಿ ಇದಕ್ಕಿಂತ ಹೆಚ್ಚಿವೆ. ನಗರದ ಗಾಂಧಿ ಕಟ್ಟೆಯಲ್ಲಿರುವ ಅಶ್ವತ್ಥ ಮರದ ಬಗೆಗಿನ ಗೊಂದಲದ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇರಿಸುವ ಅಗತ್ಯವಿದೆ. ಅಲ್ಲಿರುವ ಗಾಂಧಿ ಕಟ್ಟೆ ಐತಿಹಾಸಿಕವಾದುದು. ಇನ್ನೊಮ್ಮೆ ಪುತ್ತೂರಿಗೆ ಗಾಂಧೀಜಿ ಬರಲು ಸಾಧ್ಯವಿಲ್ಲದ ಕಾರಣ ಅವರು ಬಂದು ಕುಳಿತ ಜಾಗ ಚಾರಿತ್ರಿಕ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.ಪುತ್ತೂರಿನ ಪೊಲೀಸ್ ಉಪಾಧೀಕ್ಷಕ ಶ್ರೀನಿವಾಸ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ನಗರ ಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಉಪಸ್ಥಿತರಿದ್ದರು.

Related posts

Leave a Reply