Header Ads
Header Ads
Breaking News

ಪುತ್ತೂರಿನ ಗಾಂಧಿಕಟ್ಟೆ ಹಾಗೂ ಅಶ್ವತ್ಥ ಕಟ್ಟೆ ಸ್ಥಳಾಂತರಕ್ಕೆ ಹುನ್ನಾರ

ಪುತ್ತೂರಿನ ಸರಕಾರಿ ಬಸ್ ನಿಲ್ದಾಣದ ಬಳಿಯಿರುವಂತಹ ಐತಿಹಾಸಿಕ ಗಾಂಧಿಕಟ್ಟೆಯನ್ನು ತೆರವುಗೊಳಿಸಲು ಪ್ರಯತ್ನಗಳು ಮತ್ತೆ ಆರಂಭವಾಗಿದೆ. ಕಟ್ಟೆಯ ದುಸ್ಥಿತಿ ಹಾಗೂ ಕಟ್ಟೆಯಲ್ಲಿ ಬೆಳೆದ ಮರದ ಅಪಾಯದ ಕಾರಣವೊಡ್ಡಿ ಇದೀಗ ಈ ಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿದೆ.ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಈ ಗಾಂಧಿಕಟ್ಟೆ ಇದೀಗ ಪುತ್ತೂರಿನಲ್ಲಿ ವಿವಾದದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.1934 ರಲ್ಲಿ ಮಹಾತ್ಮಾ ಗಾಂಧಿ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದೇ ಕಟ್ಟೆಯಲ್ಲಿ ಕುಳಿತು ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಗಾಂಧೀಜಿ ಭಾಷಣ ಕೇಳಲು ಸಹಕಾರಿ ಧುರೀಣ ಮೊಳವಳ್ಳಿ ಶಿವರಾಯ, ಡಾ.ಶಿವರಾಮ ಕಾರಂತ ಸೇರಿದಂತೆ ದಿಗ್ಗಜರು ಕೂಡಾ ಸೇರಿದ್ದರು. ಅಲ್ಲದೆ ಗಾಂಧಿಕಟ್ಟೆಯ ಬಳಿಯಿರುವ ಅಶ್ವಥ ಮರವೂ ಸಾವಿರಾರು ಹಕ್ಕಿಗಳ ಆಶ್ರಯ ತಾಣವೂ ಆಗಿದೆ. ಆದರೆ 2015 ರಲ್ಲಿ ಪುತ್ತೂರಿನ ಸರಕಾರಿ ಬಸ್ ನಿಲ್ದಾಣದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಮಗಾರಿಯ ಹೆಸರಿನಲ್ಲಿ ಗಾಂಧಿಕಟ್ಟೆಯನ್ನು ಭಾಗಶ ಒಡೆಯಲಾಗಿತ್ತು. ಇದರಿಂದಾಗಿ ಕಟ್ಟೆಯು ಜರಿದು ಬೀಳುವ ಸ್ಥಿತಿಗೆ ಬಂದಿದೆ. ಅಲ್ಲದೆ ಕಟ್ಟೆಯಲ್ಲಿರುವ ಅಶ್ವಥ ಮರವೂ ಬೀಳುವ ಹಂತಕ್ಕೆ ಬಂದಿದೆ ಎನ್ನುವ ಕಾರಣಕ್ಕಾಗಿ ಮರವನ್ನು ಕಡಿದು, ಗಾಂಧಿಕಟ್ಟೆಯನ್ನು ಬೇರೊಂದು ಕಡೆಗೆ ಸ್ಥಳಾಂತರಿಸುವ ಪ್ರಯತ್ನಗಳು ಕಳೆದ ಮೂರುನಾಲ್ಕು ವರ್ಷಗಳಿಂದ ನಡೆಯುತ್ತದೇ ಇದೆ. ಇದೀಗ ಮತ್ತೆ ಈ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ತೀವೃ ವಿರೋಧವೂ ವ್ಯಕ್ತವಾಗಿದೆ.

   ಮಾಹಿತಿಯ ಪ್ರಕಾರ ಗಾಂಧಿಕಟ್ಟೆ ಇರುವಂತಹ ೩ ಸೆಂಟ್ಸ್ ಜಾಗವು ಪುತ್ತೂರು ನಗರಸಭೆಯ ಹೆಸರಿನಲ್ಲಿದೆ. ಆದರೆ ನಗರಸಭೆಯ ಪ್ರಕಾರ ಕಟ್ಟೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ರಸ್ತೆಯ ಪಕ್ಕದಲ್ಲಿದ್ದು, ಇದರ ದುರಸ್ತಿ ಅಥವಾ ತೆರವು ಕಾರ್ಯಾಚರಣೆ ಇಲಾಖೆ ಅಥವಾ ಕಟ್ಟೆಯ ಪಕ್ಕದಲ್ಲೇ ಇರುವ ಸಾರಿಗೆ ಇಲಾಖೆಗೆ ಬರುತ್ತದೆ. ಆದರೂ ಕಟ್ಟೆಯ ಅಪಾಯಕಾರಿ ಸ್ಥಿತಿಯಿಂದಾಗಿ ಮೇಲಾಧಿಕಾರಿಗಳು ಅನುಮತಿ ನೀಡಿದ್ದಲ್ಲಿ ಹಾಗೂ ನಗರಸಭೆಯ ಕೌನ್ಸಿಲ್ ನಲ್ಲಿ ಗಾಂಧಿಕಟ್ಟೆಯ ದುರಸ್ಥಿಗೆ ಅನುಮತಿ ದೊರೆತಲ್ಲಿ ನಗರಸಭೆಯಿಂದಲೇ ಕಟ್ಟೆಯನ್ನು ದುರಸ್ಥಿಪಡಿಸುವ ಕಾರ್ಯ ನಡೆಯಲಿದೆ. ಮಹಾತ್ಮಾಗಾಂಧಿಯು ಕುಳಿತ ಕಟ್ಟೆಯನ್ನು ಉಳಿಸಿಕೊಳ್ಳಲಾಗದ ಸ್ಥಳೀಯ ಆಡಳಿತದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಇದೀಗ ಗಾಂಧಿವಾದಿಗಳು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗಾಂಧಿಕಟ್ಟೆ ಹಾಗೂ ಅಶ್ವಥ ಮರವನ್ನು ತೆರವುಗೊಳಿಸಬಾರದು ಎನ್ನುವ ಒತ್ತಡವನ್ನೂ ಇವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ತರಲಾರಂಭಿಸಿದ್ದಾರೆ. 

 

Related posts

Leave a Reply