Header Ads
Header Ads
Breaking News

ಪುತ್ತೂರಿನ ಗಾಂಧಿ ಕಟ್ಟೆ ಬಳಿಯ ಅಶ್ವಥ್ಥ ಮರದ ಗೆಲ್ಲು ತೆರವು ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತೆರವು

ಪುತ್ತೂರಿನ ಗಾಂಧಿ ಕಟ್ಟೆ ಬಳಿ ಇರುವ ಅಶ್ಚತ್ಥ ಮರವನ್ನು ತೆರವುಗೊಳಿಸುವಂತೆ ಕಳೆದ ಕೆಲವು ವರ್ಷಗಳಿಂದ ಒಂದು ಗುಂಪು ಒತ್ತಾಯ ನಡೆಸಿತ್ತು. ಅಲ್ಲದೆ ಕಳೆದ ೭ ದಿನಗಳಿಂದ ಪುತ್ತೂರು ಸಂಚಾರಿ ಠಾಣೆ ವತಿಯಿಂದ ನಡೆಯುತ್ತಿರುವ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಈ ಕುರಿತು ಸಾರ್ವಜನಿಕರು ಮರ ತೆರವುಗೊಳಿಸುವ ಕುರಿತು ಸಲಹೆ ನೀಡಿದ್ದರು.ಅಶ್ವತ್ಥ ಮರದ ಸಮೀಪದಲ್ಲಿಯೇ ವಿದ್ಯುತ್ ತಂತಿ ಹಾದು ಹೋಗುವ ಕುರಿತಾಗಿಯೂ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಮೆಸ್ಕಾಂ ಸಿಬಂದಿಗಳ ಮೂಲಕ ಅಶ್ವತ್ಥ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಪೊಲೀಸರ ಈ ವರ್ತನೆಯನ್ನು ಪುತ್ತೂರಿನ ಎಚ್ಚರ ಬಳಗ ತೀವ್ರ ವಿರೋಧಿಸಿತು. 30 ವರ್ಷಗಳ ಹಿಂದೆ ಇಲ್ಲಿದ್ದ ಅಶ್ವತ್ಥ ವೃಕ್ಷ ಉರುಳಿ ಬಿದ್ದಿತ್ತು. ನಂತರ ಉರುಳಿ ಬಿದ್ದ ,ಮರಕ್ಕೆ ಸಸಿ ನೆಟ್ಟು ಬೆಳೆಸಲಾಗಿತ್ತು. ಇಂದು ಈ ಮರವು ಬೃಹದಾಕಾರವಾಗಿ ಬೆಳೆದಿದ್ದು, ಇಲ್ಲಿ ಕಳೆದ ಹಲವು ವರ್ಷಗಳಿಂದ ಕೊಕ್ಕರೆಗಳು ವಾಸಿಸುತ್ತಿವೆ. ಮರದ ಗೆಲ್ಲುಗಳನ್ನು ತೆರವುಗೊಳಿಸಿರುವ ಕಾರಣದಿಂದ ಅದರಲ್ಲಿದ್ದ ಕೊಕ್ಕರೆ ಮರಿಗಳು ಮತ್ತು ಮೊಟ್ಟೆಗಳು ನೆಲಕ್ಕುರುಳಿವೆ. ಪೊಲೀಸರು ಮರಿಗಳಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.ಅಶ್ವತ್ಥ ಮರದ ಗೆಲ್ಲುಗಳನ್ನು ತೆರವುಗೊಳಿಸಿರುವ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪುತ್ತೂರು ಎಚ್ಚರ ಬಳಗದ ಅಧ್ಯಕ್ಷ ಬಿ. ಪುರಂದರ ಭಟ್ ಪೊಲೀಸರ ಈ ಕ್ರಮ ವಿರುದ್ಧ ಕಿಡಿಕಾರಿದರು. ರಾಷ್ಟ್ರಪಿತ ಮಹಾತ್ಮಾ ಗಾಂದಿ ಪುತ್ತೂರಿಗೆ ಬಂದ ಸಂದರ್ಭ ಅಶ್ವತ್ಥ ಮರದಡಿಯಲ್ಲಿ ಬಂದು ವಿಶ್ರಾಂತಿ ಪಡೆದಿದ್ದರು. ಇಂತಹ ಐತಿಹಾಸಿಕ ಮನ್ನಣೆ ಗಳಿಸಿರುವ ಅಶ್ವತ್ಥ ಮರದ ಗೆಲ್ಲುಗಳನ್ನು ಪೊಲೀಸರು ಏಕಾಏಕಿ ಬಂದು ತೆರವುಗೊಳಿಸಿರುವುದು ಸರಿಯಲ್ಲ. ಇಲ್ಲಿ ಬಹಳ ವರ್ಷಗಳಿಂದ ಕೊಕ್ಕರೆಗಳು ವಾಸಿಸುತ್ತಿದ್ದು, ಅವುಗಳಿಗೂ ತೊಂದರೆ ಕೊಡಲಾಗಿದೆ. ಈ ಮರದ ವಿಚಾರದಲ್ಲಿ ಹಲವಾರು ವರ್ಷಗಳಿಂದ ನಾನು ಹೋರಾಟ ಮಾಡಿದ್ದೇನೆ. ಯಾವುದೇ ವಿಚಾರವನ್ನು ನನ್ನ ಗಮನಕ್ಕೆ ತಾರದೆ ಮರದ ಗೆಲ್ಲುಗಳನ್ನು ತೆರವುಗೊಳಿಸಿರುವುದು ತಪ್ಪು ಎಂದರು.ಮರದ ಗೆಲ್ಲುಗಳನ್ನು ತೆರವುಗೊಳಿಸುವ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೂ ತಂದಿಲ್ಲ ಎಂಬ ವಿಚಾರ ಎಚ್ಚರ ಬಳಗವನ್ನು ಇನ್ನಷ್ಟು ಕೆರಳಿಸಿತು.ವುದೇ ಇಲಾಖೆ ಆಗಿರಲಿ ಮರದ ವಿಚಾರ ಬಂದಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಪದ್ಧತಿ. ಆದರೆ ಪುತ್ತೂರಿನ ಅಶ್ವತ್ಥ ಮರದ ವಿಚಾರದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡದಿರುವುದು ಕೂಡಾ ಇಲ್ಲಿ ಚರ್ಚೆಯ ವಿಚಾರವಾಗಿತ್ತು.ಬಿ. ಪುರಂದರ ಭಟ್ ಅವರ ವಿರೋಧವನ್ನು ಅರಿತ ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ ಹಿತಾದೃಷ್ಠಿಯಿಂದ ಮರದ ಗೆಲ್ಲುಗಳನ್ನು ತೆರವುಗೊಳಿಸಲಾಗಿದೆ. ನೀವು ಯಾವುದೇ ಕಾರಣಕ್ಕೂ ದೃತಿಗೆಡುವ ಅವಶ್ಯಕತೆ ಇಲ್ಲ. ನೀವೆ ಹೇಳಿದ್ದೀರಿ. ಮರದ ಗೆಲ್ಲುಗಳನ್ನು ಟ್ರಿಮ್ ಮಾಡಿ ಎಂದು ನೀವೇ ಹೇಳಿದ್ದೀರಿ. ನಿಮ್ಮ ಆತ್ಮಸಾಕ್ಷಿಗೆ ನೋವು ಉಂಟು ಮಾಡುವ ಉದ್ದೇಶ ನಮಗಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡಿದೇವೆ ಹೊರತು ಸಂಪೂರ್ಣ ಮರ ತೆರವು ಮಾಡಲು ಬಂದಿಲ್ಲ ಎಂದರು. ಯಾವುದಕ್ಕೂ ಸಮಾಧಾನಿತರಾಗದ ಪುರಂದರ ಭಟ್ ಏಕಾಏಕಿ ಬಂದು ಮರದ ಗೆಲ್ಲುಗಳನ್ನು ಕಡಿದ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಮಹೇಶ್ ಪ್ರಸಾದ್ ಮಾತಿಗೆ ಮಣಿದ ಅವರು ಒಟ್ಟಿಗೆ ತೆರಳಿ ಮರದ ಕುರಿತು ಪರಿಶೀಲನೆ ನಡೆಸುವ ಆದರೆ ಐತಿಹಾಸಿಕ ಮನ್ನಣೆ ಪಡೆದಿರುವ ಅಶ್ವತ್ಥ ಮರಕ್ಕೆ ತೊಂದರೆಯಾಗದು ಎಂದು ತಿಳಿಸಿದರು.

Related posts

Leave a Reply