Header Ads
Header Ads
Breaking News

ಪುತ್ತೂರಿನ ‘ನವದುರ್ಗಾರಾಧನಾ ಸಮಿತಿ’ ವತಿಯಿಂದ ಅ.10ರಿಂದ 21ರ ತನಕ ‘ಪುತ್ತೂರು ದಸರಾ’

ಪುತ್ತೂರು : ಪುತ್ತೂರಿನ ‘ನವದುರ್ಗಾರಾಧನಾ ಸಮಿತಿ’ ವತಿಯಿಂದ ಇಲ್ಲಿನ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ 16ನೇ ವರ್ಷದ ‘ಪುತ್ತೂರು ದಸರಾ’ ಕಾರ್ಯಕ್ರಮ ನ.10ರಿಂದ 21ರ ತನಕ ನಡೆಯುವುದು ಎಂದು ನವದುರ್ಗಾರಾಧನಾ ಸಮಿತಿಯ ಸಂಚಾಲಕ ಪ್ರೀತಂ ಪುತ್ತೂರಾಯ ಅವರು ತಿಳಿಸಿದರು. ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಲ್ಕತ್ತಾದಲ್ಲಿ ಅತ್ಯಾಕರ್ಷಕ ಶೈಲಿಯ ಗಣಪತಿ,ಶಾರದೆ ಹಾಗೂ ನವದುರ್ಗೆಯರ ವಿಗ್ರಹಗಳನ್ನು ತಯಾರಿಸಿ ಪುತ್ತೂರಿಗೆ ತಂದು ಶೃಂಗಾರ ಮಾಡಲಾಗುತ್ತದೆ. ನ.10ರಂದು ಈ ಹನ್ನೊಂದು ವಿಗ್ರಹಗಳನ್ನು ನಗರದ ಬೇರೆ ಬೇರೆ ಕಡೆಗಳಿಂದ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಿ 11 ದಿನಗಳ ಕಾಲ ಪೂಜಿಸಲಾಗುತ್ತದೆ.

ಧಾರ್ಮಿಕ ಕಾರ್ಯಕ್ರಮಗಳ ಜತೆ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಲಲಿತ ಪಂಚಮಿ ದಿನ ಶ್ರೀಚಕ್ರ ಪೂಜೆ ನಡೆಯುವುದು’ ಎಂದರು.ಪುತ್ತೂರಿನಲ್ಲಿ ಕಳೆದ 15 ವರ್ಷಗಳಿಂದ ದಸರಾ ಮೆರವಣಿಗೆಯನ್ನು ಬಹಳಷ್ಟು ಸ್ತಬ್ಧ ಚಿತ್ರ, ಬೊಂಬೆ ಕುಣಿತ,ನೃತ್ಯ,ತಾಲೀಮು ಪ್ರದರ್ಶನ, ಚೆಂಡೆ ವಾದನ, ಬ್ಯಾಂಡ್ ವಾಲಗ ಸೇರಿದಂತೆ ಹಲವಾರು ಆಕರ್ಷಣೆಗಳೊಂದಿಗೆ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗಿದೆ. ಆದರೆ ದಸರಾ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಿರುವ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವು-ನೋವುಗಳು ಸಂಭವಿಸಿರುವ ಹಿನ್ನಲೆಯಲ್ಲಿ ಈ ಬಾರಿಯ ಮೆರವಣಿಗೆಯನ್ನು ಯಾವುದೇ ಆಕರ್ಷಣೆ-ಆಡಂಬರಗಳಿಲ್ಲದೆ ಸರಳ ರೀತಿಯಲ್ಲಿ ಹಗಲು ವೇಳೆ ನಡೆಸಲಾಗುವುದು ಎಂದರು. ನವದುರ್ಗಾರಾಧನಾ ಸಮಿತಿಯ ಪ್ರಮುಖರಾದ ಅರುಣ್‌ಕುಮಾರ್ ಪುತ್ತಿಲ, ಶರತ್, ಸೀತಾರಾಮ ರೈ ಕಂಬ್ಲದಡ್ಕ, ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply