Header Ads
Header Ads
Breaking News

ಪುತ್ತೂರಿನ ಬಡಗನ್ನೂರಿನಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿನಂದನ ಬಿತ್ತಿಲ್ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನ ಕೊಡಿಮರ, ಬಿಂಬಮರಗಳ ಸಮರ್ಪಣೆ-ಅದ್ಧೂರಿಯ ಮೆರವಣಿಗೆ

 

ಪುತ್ತೂರು: ಬಡಗನ್ನೂರು ಗ್ರಾಮ ವ್ಯಾಪ್ತಿಯ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಆದಿ ಧೂಮಾವತಿ ದೈವಸ್ಥಾನ, ಗುರು ಸಾಯನ ಬೈದ್ಯರ ಗುರುಸ್ಥಾನ, ದೇಯಿ ಬೈದೆತಿ ಕೋಟಿ ಚೆನ್ನಯರ ಮೂಲಸ್ಥಾನಕ್ಕೆ ಕೊಡಿಮರ ಮತ್ತು ಬಿಂಬಮರಗಳ ಸಮರ್ಪಣಾ ಮೆರವಣಿಗೆ ಬಹಳ ಅದ್ದೂರಿಯಿಂದ ನಡೆಯಿತು.

ಪುನರುತ್ಥಾನದ ಹಾದಿಯಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಹೊಸ ಚರಿತ್ರೆ ನಿರ್ಮಾಣವಾಗುತ್ತಿರುವುದಕ್ಕೆ ಈ ಮೆರವಣಿಗೆ ಸಾಕ್ಷಿಯಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿಯವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಸ್ತವಿಕ ಮಾತನಾಡಿದ ಕ್ಷೇತ್ರಾಡಿಳಿತ ಮಂಡಳಿಯ ಕಾರ್ಯದರ್ಶಿ ಸುಧಾಕರ್ ತಿಂಗಳಾಡಿ, ಕೋಟಿ ಚೆನ್ನಯರು 500 ವರ್ಷಗಳ ಹಿಂದೆ ಗೆಜ್ಜೆಗಿರಿಯಲ್ಲಿ ಹುಟ್ಟಿ ಬೆಳೆದು ಕಾರಣಿಕ ಮೆರೆದಿರುವುದು, ಅಲ್ಲಿಂದ ಮುಂದೆ ಗುರು ಸಾಯನಬೈದ್ಯರ ಸಲಹೆಯಂತೆ ಧರ್ಮ ರಕ್ಷಣೆಗಾಗಿ ಕೊಳ್ತಿಗೆ ಗ್ರಾಮದ ಚಿಮುಳ್ಳ ಗುಂಡಿ ಮೂಲಕವಾಗಿ ಎಣ್ಮೂರಿಗೆ ಹೋಗಿರುವುದು ಇತಿಹಾಸ. ಈ ಇತಿಹಾಸಕ್ಕೆ ಮರು ರೂಪ ಕೊಡುವ ಪ್ರಯತ್ನಗಳು ಇದೀಗ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆದಿದೆ.

ಜಿಲ್ಲೆಯ ವಿವಿಧ ಕಡೆಗಳಿಂದ ನೂರಾರು ಮಂದಿ ಭಕ್ತರು ಆಗಮಿಸಿದ್ದರು. ಮಾಜಿ ಸಚಿವ ನಾಗರಾಜ್ ಶೆಟ್ಟಿಯವರು ಕೊಡಿಮರ, ಬಿಂಬಮರಗಳನ್ನು ಸಾಗಿಸಲು ಲಾರಿ ವ್ಯವಸ್ಥೆ ಒದಗಿಸಿದ್ದರು. ಆಕರ್ಷಕ ಚೆಂಡೆ ವಾದನ ಗಮನಸೆಳೆಯಿತು. ಭಕ್ತಾಧಿಗಳಿಗೆ ಬೆಲ್ಲನೀರಿನ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ ಶ್ರೀಕ್ಷೇತ್ರದ ಅಧ್ಯಕ್ಷ ಜಯಂತ ನಡುಬೈಲ್, ಶಶಿಧರ ಕಿನ್ನಿಮಜಲು ,ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಫುಡಾದ ಅಧ್ಯಕ್ಷ ಪ್ರಸಾದ್ ಕೌಶಲ್ಯ ಶೆಟ್ಟಿ, ಗೆಜ್ಜೆಗಿರಿ ನಂದನ ಬಿತ್ತಿಲ್‌ನ ಯಜಮಾನ ಶ್ರೀಧರ ಪೂಜಾರಿ, ರಾಜಶೇಖರ ಕೋಟ್ಯಾನ್, ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸವಿತಾ ಎಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply