Header Ads
Header Ads
Breaking News

ಪುತ್ತೂರಿನ ಬನ್ನೂರಿನಲ್ಲಿ ರಕ್ತದಾನ ಶಿಬಿರ

 

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು ಮತ್ತು ಇಚ್ಚಾ ಇಂಟರ್ ನ್ಯಾಶನಲ್ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಬಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಪುತ್ತೂರಿನ ಬನ್ನೂರು ಆರ್.ಟಿ.ಓ ಬಳಿ ಇರುವ ಅಂಗನವಾಡಿ ಕೇಂದ್ರದ ಮರ್ಹೂಂ ಹಂಝ ಅಫ್ನಾನ್ ವೇದಿಕೆಯಲ್ಲಿ ಯಶಸ್ವಿಯಾಗಿ ಜರುಗಿತು.

ಮುಹಮ್ಮದ್ ಅಸ್‍ಅದ್ ಸಖಾಫಿ ತಿರುವಟ್ಟೂರು ಅವರು ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರಿನ ಅಧ್ಯಕ್ಷರಾದ  ಅಝರ್ ಬನ್ನೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 54 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಶಿಬಿರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪುತ್ತೂರು ವಲಯದ ನಿರ್ವಾಹಕರಾದ ಸಾಮಾಜಿಕ ಕಾರ್ಯಕರ್ತ ಇಫಾಝ್ ಬನ್ನೂರುರವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ, ನಗರ ಸಭಾ ಸದಸ್ಯರಾದ ಕೆ.ಫಾತಿಮತ್ ಝೋಹರಾ, ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಅಧ್ಯಕ್ಷರಾದ ಮೊಯಿದೀನ್ ಹಾಜಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಿಟಿ ಡಿವಿಜನ್ ಪುತ್ತೂರು ಅಧ್ಯಕ್ಷರಾದ ಯಹ್ಯಾ ಕೂರ್ನಡ್ಕ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕರಾದ ನಿಸಾರ್ ಉಳ್ಳಾಲ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕರಾದ ಇಮ್ರಾನ್ ಮದಕ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply