Header Ads
Breaking News

ಪುತ್ತೂರಿನ ಬೊಳುವಾರಿನಲ್ಲಿ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ

ಪುತ್ತೂರು: ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡ ಮತ್ತು ಸಮಯ ಪ್ರಜ್ಞೆ ಮೆರೆದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳ ಸಕಾಲಿಕ ಮಾಹಿತಿಯ ಮೂಲಕ ತಕ್ಷಣ ಅಗ್ನಿಶಾಮಕದಳದವರು ಆಗಮಿಸಿ ಸತತ ಮೂರುವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನಗೊಳಿಸಿದ ಘಟನೆ ನಸುಕಿನ ಜಾವ ನಡೆದಿದೆ.

ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿರುವ ಉಸ್ಮಾನ್ ಮಾಲಕತ್ವದ ಹ್ಯಾರಿಂಗ್ ಸ್ಟುಡಿಯೋ ಹೆಸರಿನಲ್ಲಿರುವ ಸೆಲೂನ್‍ವೊಂದರಿಂದ ಹೊಗೆ ಬರುವುದನ್ನು ಗಮನಿಸಿದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕದಳಕ್ಕೆ ಫೋನ್  ಮಾಡಿದ್ದರು. ಈ ನಡುವೆ ಸ್ಥಳೀಯರ ಮೂಲಕ ಸೆಲೂನ್ ಮಾಲಕರನ್ನು ಸ್ಥಳಕ್ಕೆ ಕೆರೆಸಿ ಸಂಸ್ಥೆಯ ಬಾಗಿಲನ್ನು ತೆರೆಯುವ ವೇಳೆ ಒಳಗೆ ಬೆಂಕಿ ಜ್ವಾಲೆ ಹತ್ತಿಕೊಳ್ಳುತ್ತಿತ್ತಲ್ಲದೆ ಪಕ್ಕದಲ್ಲಿರುವ ದಾರಂದಕುಕ್ಕು ನಿಶಾದ್ ಎಂಬವರ ಮಾಲಕತ್ವದ ಡಿ.ಕೆ.ಮೊಬೈಲ್ಸ್ ಅಂಗಡಿಗೂ ಪಸರಿಸಿತ್ತು. ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಯತ್ನಿಸುತ್ತಿದ್ದ ವೇಳೆ ಬೆಂಕಿ ಜ್ವಾಲೆ ಅಂಗಡಿಯ ಮೇಲ್ಛಾವಣಿಯ ಮೂಲಕ ಪಕ್ಕದ ತರಕಾರಿ ಅಂಗಡಿ ಮತ್ತು ಅಕ್ಕಪಕ್ಕದಲ್ಲಿರುವ ಎರಡು ಹೊಟೇಲ್‍ಗಳಿಗೂ ಪಸರಿಸಿತ್ತು. ಅಗ್ನಿಶಾಮಕದಳದವರು ನಿರಂತರ ಮೂರುವರೆ ಗಂಟೆ ಕಾರ್ಯಾಚರಣೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ಶಮನಗೊಳಿಸಲಾಗಿದ್ದು ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.
ಬೆಳ್ಳಂಬೆಳ್ಳಗೆ ಧಗ ಧಗನೆ ಹೊತ್ತಿ ಉರಿದ ಪುತ್ತೂರಿನ ಬೊಳುವಾರಿನ ಕೆಲ ಅಂಗಡಿಗಳು ? ಮೂರು ಗಂಟೆಯ ಕಾರ್ಯಾಚಾರಣೆ ಬಳಿಕ ಬೆಂಕಿ ಹತೋಟಿಗೆ.

Related posts

Leave a Reply

Your email address will not be published. Required fields are marked *