Header Ads
Header Ads
Breaking News

ಪುತ್ತೂರಿನ ಮುಂಡೂರಿನಲ್ಲೊಂದು ಅಪರೂಪದ ದೇವಳ

ಪುತ್ತೂರು; ಜನತೆಯ ಆಸ್ತಿಕ ತಾಣಗಳಿಗೆ ರಾಜ್ಯದಲ್ಲಿ ಯಾವುದೇ ಬರವಿಲ್ಲ. ದೇವರ, ದೈವಗಳ, ನಾಗನಗುಡಿಗಳು ಜನತೆಯ ಒಡನಾಡಿಗಳಾಗಿ ಬೆಳೆದು ಬಂದ ಪರಿಸರವಿದು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಭಾಗಕ್ಕೆ ಹೋದರೂ ಅಲ್ಲೊಂದು ಆಸ್ತಿಕ ತಾಣ ಇದೆ. ಇಂತಹ ವೈವಿದ್ಯತೆ ತಾಣಗಳ ಪೈಕಿ ಅಪರೂಪವಾದ ದೇವಳಗಳು ಇವೆ. ರಾಜ್ಯದಲ್ಲಿ ಮೂರು ಕಡೆಗಳಲ್ಲಿ ಮಾತ್ರ ಕಾಣ ಸಿಗುವ ಮೃತ್ಯುಂಜೇಶ್ವರನ ದೇವಾಲಯವೊಂದು ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ಆಸ್ತಿಕ ಜನತೆಯ ನೆಮ್ಮದಿಯ ತಾಣವಾಗಿದೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿರುವ ನರಿಮೊಗ್ರು ಮೃತ್ಯುಂಜಯೇಶ್ವರ ದೇವಾಲಯ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯೇಶ್ವರ ದೇವಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಡೂರು ಮೃತ್ಯುಂಜಯೇಶ್ವರ ದೇವಾಲಯದ ಹಲವು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಮಾಗಣೆ ದೇವಳ. ಪುತ್ತೂರು ತಾಲ್ಲೂಕಿನ ನರಿಮೊಗ್ರು ಎಂಬಲ್ಲಿ ಮಂಜೇಶ್ವರ -ಪುತ್ತೂರು-ಸುಬ್ರಹ್ಮಣ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿ ಅಡಿಕೆ ತೆಂಗು ಬೆಳೆಗಳಿಂದ ಕೂಡಿದ ಹಸಿರುಮಯ ಪ್ರಕೃತಿ ರಮಣೀಯ ತಾಣದಲ್ಲಿ ಈ ದೇವಳವಿದೆ. ಈ ದೇವಳ ಪ್ರಾಚೀನ ಶಿಲಾಶಾಸನದ ಪ್ರಕಾರ 950 ವರ್ಷಗಳ ಇತಿಹಾಸ ಹೊಂದಿದೆ.ಪುಷ್ಕರಣಿ' ಕೆರೆಯಿರುವ ಪ್ರಾಚೀನ ಕಾರಣಿಕ ಕ್ಷೇತ್ರವೂ ಆಗಿದೆ. ತ್ರೇತಾಯುಗದಲ್ಲಿ ಖರಾಸುರನೆಂಬ ರಾಕ್ಷಸನು ಶಿವನಿಂದ ಪರವಾಗಿ ಪಡೆದ ಮೂರು ಶಿವಲಿಂಗಗಳ ಪೈಕಿ ನಾಲಿಗೆಯಲ್ಲಿ ಇರಿಸಿಕೊಂಡು ಬಂದಿದ್ದ ಶಿವಲಿಂಗವನ್ನು ಮೊಣಕಾಲೂರಿ ಇರಿಸಿದ ಸ್ಥಳ ಕಾಲಕ್ರಮೇಣ ಮುಂಡೂರು ಆಗಿದೆ ಎಂಬ ಐತಿಹ್ಯವಿದೆ. ಈ ಕ್ಷೇತ್ರದಲ್ಲಿ ಮೃತ್ಯುಂಜಯೇಶ್ವರ ದೇವರಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಮೃತ್ಯುಂಜಯ ಜಪ, ನವಗ್ರಹ ಶಾಂತಿ ಹೋಮವನ್ನು ಶ್ರದ್ಧಾ ಭಕ್ತಿಯಿಂದ ನಡೆಸಿದರೆ ಮೃತ್ಯುಂಜಯೇಶ್ವರ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂಬುವುದು ಭಕ್ತರ ನಂಬಿಕೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯದ ಸಂದರ್ಭದಲ್ಲಿ ಈ ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. <img class="size-medium wp-image-24226 aligncenter" src="http://www.v4news.com/wp-content/uploads/2018/11/vlcsnap-2018-11-05-16h43m12s423-300x169.jpg" alt="" width="300" height="169" /></strong>
<strong>ಮುಂಡೂರು ಕ್ಷೇತ್ರದಲ್ಲಿ ಮೃತ್ಯುಂಜಯೇಶ್ವರನೇ ಸ್ವತಹಃ ನೆಲೆ ನಿಂತಿರುವ ಕಾರಣ ಇಲ್ಲಿ ಜನ್ಮ ನಕ್ಷತ್ರ,ಜಾತಕ ಫಲ ದೋಷಾಧಿಗಳಿಗೆ ಸಂಬಂಧಿಸಿದ ಪೂಜಾಧಿಗಳನ್ನು ನೆರವೇರಿಸಿದಲ್ಲಿ ಮೃತ್ಯು ದೋಷ,ಮೃತ್ಯು ಕಂಟಕ,ಮೃತ್ಯು ಭಯ ನಿವಾರಣೆ ಆಗಿ ಆಯುಷ್ಯ ವೃದ್ಧಿಯಾಗುತ್ತದೆ ಎಂಬುವುದು ಜನರ ನಂಬಿಕೆ. ಹಾಗಾಗಿಯೇ ಈ ಕ್ಷೇತ್ರದ ಮಹಿಮೆ ದಿನದಿಂದ ದಿನಕ್ಕೆ ಬೆಳಗುತ್ತಿದೆ. ಮುಂಡೂರು ಮೃತ್ಯುಂಜಯೇಶ್ವರ ದೇವಾಲಯ ಈ ನಾಡನ್ನು ಆಳಿದ ಅಳಪ ಅರಸರ ಕಾಲದ ಶಿಲ್ಪಕಲಾಕೃತಿ ಹೊಂದಿದೆ. ಈ ದೇವಳದ ತೀರ್ಥಮಂಟಪದಷ್ಟು ದೊಡ್ಡ ತೀರ್ಥ ಮಂಟಪ ಜಿಲ್ಲೆಯ ಬೇರಾವ ದೇವಾಲಯಗಳಲ್ಲಿಯೂ ಇಲ್ಲ. ತೀರ್ಥ ಮಂಟಪದ ಮೇಲ್ಭಾಗದಲ್ಲಿ 12 ರಾಶಿಗಳ ಮರದ ಕೆತ್ತನೆಯ ಶಿಲ್ಪ ಕಲೆಯಿದೆ.ದೇವಳದ ನೈರುತ್ಯ ದಿಕ್ಕಿನಲ್ಲಿ ಗಣಪತಿ ಮತ್ತು ಶಾಸ್ತಾವು ಗುಡಿ, ವಾಯುವ್ಯ ಭಾಗದಲ್ಲಿ ದೇವಿ (ದುರ್ಗೆ) ಸನ್ನಿಧಿ,ಆಗ್ನೇಯ ಮೂಲೆಯಲ್ಲಿ ಪಿಲಿಚಾಮುಂಡಿ ದೈವ ಸನ್ನಿಧಿ, ಬಲಭಾಗದಲ್ಲಿ ತೀರ್ಥ ಬಾವಿ, ದೇವಳದ ಹೊರಭಾಗದಲ್ಲಿ ನಾಗ ಸನ್ನಿಧಿ,ಮತ್ತು ಪಕ್ಕದಲ್ಲಿಯೇ ಪವಿತ್ರವಾದ ಪುಷ್ಕರಣಿ ಕರೆಯಿದೆ. ದೇವಳದ ಗರ್ಭಗುಡಿಯಲ್ಲಿ ದೇವರಿಗೆ ಮಾಡಿದ ಅಭಿಷೇಕ ನೀರು ದೇವಳದ ಒಳಾಂಗಣದಲ್ಲಿರುವ ತೀರ್ಥ ಬಾವಿಯಾಗಿ ಹೊರಭಾಗದಲ್ಲಿರುವ ಪುಷ್ಕರಣಿ ಕೆರೆಗೆ ಸಂಪರ್ಕ ಕಲ್ಪಿಸುತ್ತದೆ ಎಂಬ ನಂಬಿಕೆ ಇದೆ. ದೇವಾಲಯಕ್ಕೆ ಸಂಬಂಧಿಸಿದ ಶಿಲಾಶಾಸನವಿದ್ದು, ಇದೀಗ ನಾಶ ಹೊಂದಿದೆ.2008ರಲ್ಲಿ ಪುನರ್‍ನವೀಕರಣ.ಒಂದು ಹಂತದಲ್ಲಿ ಈ ದೇವಳ ತೀರಾ ಅಜೀರ್ಣಾವಸ್ಥೆಗೆ ತಲುಪಿತ್ತು.<img class="size-medium wp-image-24227 aligncenter" src="http://www.v4news.com/wp-content/uploads/2018/11/vlcsnap-2018-11-05-16h44m02s398-300x169.jpg" alt="" width="300" height="169" /> ಸ್ಥಳೀಯರೇ ಆದ ಬೆಂಗಳೂರಿನ ಉದ್ಯಮಿ ನಳಿನಿ ಲೋಕಪ್ಪ ಗೌಡ ಅವರು ಮುಂದಾಳತ್ವದಲ್ಲಿ 2008ರಲ್ಲಿ ದೇವಳದ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ ಈ ದೇವಳ ದಿನೇ ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇವಳದ ಒಳಾಂಗಣ ಮತ್ತು ಎದುರುಭಾಗದ ಹೊರಾಂಗಣಕ್ಕೆ ಇಂಟರ್‍ಲಾಕ್ ಅಳವಡಿಸಲಾಗಿದೆ. ಎದುರುಭಾಗದ ಹೊರಾಂಗಣಕ್ಕೆ ಶೀಟ್ ಅಳವಡಿಸಿ ಮೇಲ್ಛಾವಣಿ ನಿರ್ಮಿಸಲಾಗಿದೆ. ದೇವಳದ ದಕ್ಷಿಣ ಭಾಗದಲ್ಲಿ ಪಾಕಶಾಲೆ,ಭೋಜನಾ ಶಾಲೆ ಮತ್ತು ಸುಸಜ್ಜಿತ ಸಭಾಭವನ ನಿರ್ಮಾಣಗೊಂಡಿದೆ.
ದೇವಳದ ಪವಿತ್ರ ಪುಷ್ಕರಣಿ ಕೆರೆಯ ಅಭಿವೃದ್ಧಿಗೆ ರೂ.50 ಲಕ್ಷ ವೆಚ್ಚದ ಬಜೆಟ್ ನಿರ್ಮಿಸಲಾಗಿದ್ದು, ಸರ್ಕಾರದ ಅನುದಾನದ ಜತೆ ಭಕ್ತರ ನೆರವು ಪಡೆದು ಪುಷ್ಕರಣಿ ಕರೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ವಸತಿಗೃಹ ನಿರ್ಮಿಸುವ ಹಾಗೂ ದೇವಳದಲ್ಲಿ ಪ್ರತೀ ಸೋಮವಾರ ಅನ್ನದಾನ ಸೇವೆ ನಡೆಸುವ ಚಿಂತನೆ ಇದೆ. ಭಕ್ತರ ಅನುಕೂಲ ದೃಷ್ಟಿಯಿಂದ ಸುಸಜ್ಜಿತ ಶೌಚಾಲಯ ವ್ಯವಸ್ಥೆಯೂ ಆಗಬೇಕಿದೆ’ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಹೇಶ್ಚಂದ್ರ ಸಾಲ್ಯಾನ್ ಅವರು ಹೇಳುತ್ತಾರೆ.

`ನಾನು ಇಲ್ಲಿ 18 ವರ್ಷಗಳಿಂದ ಅರ್ಚಕನಾಗಿ ದೇವರ ಸೇವೆ ಮಾಡುತ್ತಿದ್ದೇನೆ. ಇಲ್ಲಿನ ಮೃತ್ಯುಂಜಯೇಶ್ವರ ಸರ್ವಕಂಟಕ ದೋಷ ನಿವಾರಣಾ ಮೂರ್ತಿಯಾಗಿದ್ದು, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ಸಂಬಂಧಿಸಿದ ಪೂಜಾಧಿಗಳನ್ನು ಭಕ್ತರು ಮಾಡಿಸುತ್ತಿದ್ದಾರೆ. ಇಲ್ಲಿ ಬಂದ ಎಲ್ಲರಿಗೂ ದೇವರ ಅನುಗ್ರಹ ಲಭಿಸಿದೆ ಎನ್ನುತ್ತಾರೆ’ -ರಮೇಶ್ ಬೈಪಾಡಿತ್ತಾಯ. ದೇವಳದಲ್ಲಿ ನಿತ್ಯಪೂಜೆಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಹಾಗೂ ಸಂಜೆ 6ರಿಂದ ರಾತ್ರಿ 8 ಗಂಟೆ ತನಕ ಅವಕಾಶವಿದೆ. ಬೆಳಿಗ್ಗೆ 11 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಮಹಾ ಪೂಜೆ ನಡೆಯುತ್ತದೆ. ವರ್ಷಾವಧಿ ಜಾತ್ರೆ ಮಾರ್ಚ್ ತಿಂಗಳಲ್ಲಿ ಎರಡು ದಿನಗಳ ಕಾಲ ಇಲ್ಲಿ ನಡೆಯುತ್ತಿದ್ದು, ಆರಂಭದ ದಿನ ಸಾರ್ವಜನಿಕ ಮಹಾ ಮೃತ್ಯುಂಜಯ ಹೋಮ ಇಲ್ಲಿನ ವಿಶೇಷವಾಗಿದೆ, ದೇವಳದ ಸಂಪರ್ಕ ದೂರವಾಣಿ : 08251-288777 ಹಾಗೂ ಮೊಬೈಲ್ -9480757516 ಆಗಿದೆ

Related posts

Leave a Reply