Header Ads
Header Ads
Breaking News

ಪುತ್ತೂರಿನ ಮೇಗಿನಪಂಜ ಮನೆಗೆ ಹೋಗುವ ರಸ್ತೆ ಬಂದ್ : ತಹಶೀಲ್ದಾರ್ ಭೇಟಿ, ಪರಿಶೀಲನೆ

ಆರ್ಯಾಪು ಗ್ರಾಮದ ಮೇಗಿನಪಂಜ ಎಂಬಲ್ಲಿ ಮನೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಿರುವ ಕುರಿತು ಬಂದ ದೂರಿನ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್ ಅನಂತಶಂಕರ ಅವರು ಸ್ಥಳ ಪರಿಶೀಲನೆ ಮಾಡಿ ಅತಿಕ್ರಮಣ ತೆರವುಗೊಳಿಸಿದ್ದಾರೆ. ಮೇಗಿನಪಂಜ ನಿವಾಸಿ ಎ.ಕೃಷ್ಣ ನಾಯ್ಕ ಎಂಬವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಭಾಗವನ್ನು ಸ್ಥಳೀಯ ನಿವಾಸಿ ಚನಿಯಪ್ಪ ನಾಯ್ಕರ ಪುತ್ರ ರಾಮನಾಯ್ಕ ಎಂಬವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಬೇಲಿ ಹಾಕಿ ರಸ್ತೆ ಸಂಪರ್ಕಕ್ಕೆ ತಡೆ ಒಡ್ಡಿದ್ದರು. ಈ ಕುರಿತು ಕೃಷ್ಣ ನಾಯ್ಕ ಅವರ ತಾಯಿ ದೇವಕಿ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿದ್ದರು. 

ಈ ದೂರಿನ ಹಿನ್ನಲೆಯಲ್ಲಿ ತಹಶೀಲ್ದಾರ್ ಅನಂತಶಂಕರ ಮತ್ತು ಸಿಬ್ಬಂದಿಗಳು ವಿವಾದಿತ ಸ್ಥಳಕ್ಕೆ ತೆರಳಿ ಪರಶೀಲನೆ ನಡೆಸಿ ರಸ್ತೆ ತೆರವುಗೊಳಿಸುವಂತೆ ಸೂಚಿಸಿದರು. ತಹಶೀಲ್ದಾರ್ ಆದೇಶದಂತೆ ರಸ್ತೆ ಬಂದ್ ಮಾಡಿದವರೇ ತೆರವುಗೊಳಿಸುವ ಕೆಲಸ ಮಾಡಿದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷ ವಸಂತ ಶ್ರೀದುರ್ಗ, ಗ್ರಾಮಕರಣಿಕ ವೆಂಕಟೇಶ್, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ್ ನಾಯ್ಕ್ ಮತ್ತಿತರರು ಇದ್ದರು.

Related posts

Leave a Reply

Your email address will not be published. Required fields are marked *