Header Ads
Breaking News

ಪುತ್ತೂರಿನ ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ವಿಸ್ಮಯ : ಶ್ರೀ ಮಹಾಲಕ್ಷ್ಮೀಯ ಬಿಂಬ ಸ್ಮರ್ಶಿಸಿದ ಸೂರ್ಯ ರಶ್ಮಿ

ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿಯ ಶ್ರೀ ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷಿದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಮೀನ ಸಂಕ್ರಮಣ ವಿಶೇಷ ದಿನವಾದ ಶನಿವಾರ ಬೆಳಗ್ಗೆ ಸೂರ್ಯರಶ್ಮಿ ಶ್ರೀ ಮಹಾಲಕ್ಷ್ಮೀಯ ಬಿಂಬವನ್ನು ಸ್ಪರ್ಶಿಸಿತು.

ಸೂರ್ಯ ದೇವನು ಕುಂಭ ರಾಶಿಯಿಂದ ಮೀನರಾಶಿಗೆ ದಾಟುವ ಸಂಕ್ರಮಣದ ಪುಣ್ಯ ಪರ್ವ ಕಾಲದಲ್ಲಿ ಬೆಳಗ್ಗೆ 7 ಗಂಟೆ ಹೊತ್ತಿಗೆ ಸೂರ್ಯರಶ್ಮಿ ದೇಗುಲದ ಮೂರು ಬಾಗಿಲುಗಳನ್ನು ದಾಟಿ ಶ್ರೀ ಮಹಾಲಕ್ಷ್ಮೀ ಬಿಂಬವನ್ನು ಸ್ಪರ್ಶಿಸಿತು. ಬಳಿಕ 7.30ಕ್ಕೆ ವಿಶೇಷವಾಗಿ ಸೂರ್ಯನ ಆರತಿ ಬೆಳಗುವ ಮೂಲಕ ಪೂಜೆ ನಡೆಯಿತು. ದೇವಸ್ಥಾನದ ಧರ್ಮದರ್ಶಿ ಯನ್. ಐತ್ತಪ್ಪ ಸಪಲ್ಯರು ಶ್ರೀ ಮಹಾಲಕ್ಷ್ಮೀ ದೇವಿಗೆ ಮಹಾಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಂಡರು.

ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಕೃಷ್ಣಶಿಲೆಯಿಂದ ನೂತನ ಗರ್ಭಗುಡಿ ನಿರ್ಮಾಣ ಹಾಗೂ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸುಂದರ ಶಿಲಾಮಯ ಸುತ್ತುಪೌಳಿ ಕಾಮಗಾರಿ ಭರದಿಂದ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಲಕ್ಷ್ಮೀಪ್ರಸಾದ್ ಬೆಟ್ಟ, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾದ ನಯನ ವಿ.ರೈ, ಪ್ರಭಾ ಆಚಾರ್ಯ, ದಿನೇಶ್ ಸಾಲಿಯಾನ್, ಸರೇಶ್ ಹಾರಾಡಿ, ನಾಗೇಶ್ ಆಚಾರ್ಯ, ಜಗದೀಶ್ ಆಚಾರ್ಯ, ಹಲವಾರು ಭಕ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *