Header Ads
Breaking News

ಕೌಡಿಚ್ಚಾರಿನಲ್ಲಿ ಅಪ್ರಾಪ್ತೆಯ ಮೇಲೆ ಪೊಲೀಸ್ ದೌರ್ಜನ್ಯ ವಿಚಾರ : ಬಾಲಕಿಯ ಆರೋಗ್ಯವನ್ನ ವಿಚಾರಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು:ಕೌಡಿಚ್ಚಾರಿನಲ್ಲಿ ನಡೆದ ಅಪ್ರಾಪ್ತೆಯ ಮೇಲೆ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿದ್ಯಾರ್ಥಿನಿಯನ್ನು ಜು.1ರಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರಿಂದ ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಕ್ಷಮ್ಯ ಅಪರಾಧ. ಕರೆಂಟ್ ಶಾಕ್ ಕೊಡುವಂತ ಶಿಕ್ಷೆಗಳು ನೀಡುವುದು ಎಲ್ಲಿಯೂ ಕೇಳಿಬರುವುದಿಲ್ಲ. ಕೊಲೆ ಮಾಡಿದವರಿಗೂ ಅಂತಹ ಶಿಕ್ಷೆಗಳು ನಡೆಯುವುದು ಅಪರೂಪ. ಹಾಗಿದ್ದರೂ ಪೊಲೀಸ್ ಇಲಾಖೆ ಇಲಾಖೆ ತಕ್ಷಣ ಸ್ಪಂಧನೆ ನೀಡಿ ತಪ್ಪಿತಸ್ಥರನ್ನು ಸಿಬಂದಿಗಳನ್ನು ಅಮಾನತು ಮಾಡಿದ್ದಾರೆ. ಪೋಷಕರ ಎದುರಲ್ಲಿ ಬಾಲಕಿಗೆ ಕಾಲಿನ ಅಡಿ ಭಾಗ, ಹೊಟ್ಟೆಗೆ ಹೊಡೆದಿದ್ದಾರೆ ಎಂಬ ಆರೋಪವಿದೆ. ಬಾಲಕಿಯ ವಯಸ್ಸಿಗೆ ಹೋಲಿಸಿದರೆ ಈ ರೀತಿಯ ಶಿಕ್ಷೆ ನೀಡುವುದು ಸರಿಯಲ್ಲ. ತನಿಖೆಯಿಂದ ಸತ್ಯಾಂಶಗಳು ಹೊರಬರಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾಂಗ್ರೆಸ್ ಮುಖಂಡರಾದ ಎಂ.ಬಿ ವಿಶ್ವನಾಥ ರೈ, ಕೃಷ್ಣಪ್ರಸಾದ್ ಆಳ್ವ, ಶಿವರಾಮ ಆಳ್ವ ಸಾಜ, ರೋಷಣ್ ರೈ ಬನ್ನೂರು, ವಿಶಾಲಾಕ್ಷಿ ಬನ್ನೂರು, ಸನಂ ಬಾಬು, ಸುರೇಶ್, ರಿಯಾಝ್, ಪ್ರಶಾಂತ್ ಮರಿಕೆ ಸೇರಿದಂತೆ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು.
ಅಧಿಕಾರಿಗಳಿಂದ ವಿಚಾರಣೆ ಘಟನೆಗೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಭಾರ ಅಧಿಕಾರಿ ಶ್ಯಾಮಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಲೇಡಿಗೋಶನ್ ಆಸ್ಪತ್ರೆಯ ಕೌನ್ಸಿಲರ್ ಹರ್ಷಿತಾ ಸಹಾಯಕ ವಝೀರ್, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿಯವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗೆ ಮಾಹಿತಿ ಪಡೆದುಕೊಂಡರು.

Related posts

Leave a Reply

Your email address will not be published. Required fields are marked *