Header Ads
Header Ads
Breaking News

ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ :’ಡಯಾಲಿಸಿಸ್’ ವಿಭಾಗದಲ್ಲಿ ತುಕ್ಕು ಹಿಡಿದ ’ಮಂಚ’

ಪುತ್ತೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ೩ ವರ್ಷಗಳಿಂದ ಹಲವಾರು ಸಮಸ್ಯೆಗಳು ಕಾಡುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜಾಣ ’ಮೌನ’ ವಹಿಸುತ್ತಿದೆ.

ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ ಮೂರು ಮೆಷಿನ್ ಗಳಿದ್ದು, ಒಂದು ಹೊಸ ಮೆಷಿನ್ ಬಂದು ೩ ತಿಂಗಳಾಗಿದೆ. ಇದನ್ನು ಬಳಕೆ ಮಾಡುವಲ್ಲಿ ಸರ್ಕಾರಿ ಆಸ್ಪತ್ರೆಯ ಆಡಳಿತ ವಿಭಾಗ ವಿಫಲವಾಗಿದೆ. ಆರೋಗ್ಯರಕ್ಷಾ ಸಮಿತಿ ಒತ್ತಡದ ಮೂಲಕ ಕಳೆದ ೩ ದಿನಗಳಿಂದ ಈ ಯಂತ್ರವನ್ನು ಉಪಯೋಗಿಸಲಾಗುತ್ತಿದೆಯಾದರೂ ಈ ಡಯಾಲಿಸಿಸ್ ವಿಭಾಗದಲ್ಲಿ ರೋಗಿಗಳ ಬಳಕೆಗೆ ಉಪಯೋಗ ಮಾಡುವ ಮಂಚ ತುಕ್ಕು ಹಿಡಿದು ಮುರಿದು ಬೀಳುವ ಸ್ಥಿತಿಯಲ್ಲಿದೆ..!

ಡಯಾಲಿಸಿಸ್ ಗಾಗಿ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಈಗಾಗಲೇ ೪೬ ಮಂದಿ ಕಾಯುವವರ ಪಟ್ಟಿಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೊಸದಾಗಿ ಬಂದ ಯಂತ್ರವನ್ನು ಬಳಕೆ ಮಾಡದೆ ಉಳಿಸಿಕೊಳ್ಳಲಾಗಿದೆ. ಈ ವಿಭಾಗದಲ್ಲಿ ಮುರಿದುಬೀಳುವ ಸ್ಥಿತಿಯಲ್ಲಿರುವ ಮಂಚವನ್ನೂ ಬದಲಿಸುವ ಚಿಂತನೆಯ ಕೆಲಸ ಆಡಳಿತ ವೈದ್ಯಾಧಿಕಾರಿ ನಡೆಸುತ್ತಿಲ್ಲ ಎಂದು ಶಾಸಕರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿ ಆರೋಪಿಸಿದೆ.
ಕಳೆದ ಮೂರು ವರ್ಷಗಳಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಹದಗೆಟ್ಟ ಸ್ಥಿಯಲ್ಲಿದೆ. ಇದನ್ನು ಸುಧಾರಿಸುವ ಮನಸ್ಥಿತಿ ಇಲ್ಲಿನ ಆಡಳಿತ ವೈದ್ಯಾಧಿಕಾರಿಗೆ ಇಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದರೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ೩ ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಿಲ್ಲ. ಬರಗಾಲ ಪೀಡಿತ ಪ್ರದೇಶದಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆ ತಜ್ಞರು ಸಿಗುತ್ತಾರೆ. ಆದರೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮಾತ್ರ ೩ ವರ್ಷವಾದರೂ ಹೆರಿಗೆ ತಜ್ಞರು ಸಿಕ್ಕಿಲ್ಲ. ಇಲ್ಲಿ ಇರುವ ವೈದ್ಯಾಧಿಕಾರಿಗಳು ಇಲ್ಲಿನ ಅವ್ಯವಸ್ಥೆ ಕಂಡು ನಾವು ಬೇರೆ ಕಡೆಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಹೀಗಾದರೆ ಆಸ್ಪತ್ರೆ ಗತಿ ಅಧೋಗತಿಯಾಗುತ್ತದೆ. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆ ಹೊಣೆ ಎಂದು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಡಾ.ರಾಘವೇಂದ್ರ ಪ್ರಸಾದ್ ಹಾಗೂ ರಫೀಕ್ ದರ್ಬೆ ದೂರಿದ್ದಾರೆ.

Related posts

Leave a Reply