Header Ads
Breaking News

ಪುತ್ತೂರಿನ ಹನುಮಗಿರಿ ಕ್ಷೇತ್ರದಲ್ಲಿ ಭಜನಾ ಸಂಭ್ರಮ : ಡಿ.29ರಂದು ನಡೆಯಲಿರುವ ಕಾರ್ಯಕ್ರಮ

ಪುತ್ತೂರು ತಾಲ್ಲೂಕಿನ ಹನುಮಗಿರಿ ಕ್ಷೇತ್ರದಲ್ಲಿ ಡಿ.29ರಂದು ನಡೆಯಲಿರುವ `ಭಜನಾ ಸಂಭ್ರಮ’ ಕಾರ್ಯಕ್ರಮದಲ್ಲಿ ದ.ಕ,ಉಡುಪಿ,ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ 1400 ಭಜನಾ ತಂಡಗಳು ಪಾಲ್ಗೊಳ್ಳಲು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದು, ಅಂದು ಸಂಜೆ 6.02ಕ್ಕೆ 1400 ದೀಪಗಳನ್ನು ಹಚ್ಚಿ, 7ಸಾವಿರ ಹಣತೆಗಳನ್ನು ಬೆಳಗಿ ನಡೆಯುವ 48 ನಿಮಿಷಗಳ ಕಾಲದ ಭಜನಾ ಸಂಭ್ರಮ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರಲಿದೆ

ಹನುಮಗಿರಿ ಕ್ಷೇತ್ರದಲ್ಲಿ ಪ್ರತೀ ಭಜನಾ ತಂಡದಿಂದ ತಲಾ 5 ಮಂದಿ ಸದಸ್ಯರಂತೆ 1400 ತಂಡಗಳ ಒಟ್ಟು 7 ಸಾವಿರ ಮಂದಿ ಭಜನಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ರಾಮಕೃಷ್ಣ ಕಾಟುಕುಕ್ಕೆ ಸಂಗಡಿಗರು ಹಾಡುವ 6 ಭಜನೆಗಳನ್ನು 7ಸಾವಿರ ಮಂದಿ ಭಜಕರು ಏಕಕಾಲದಲ್ಲಿ ಹಾಡುವ ಈ ಕಾರ್ಯಕ್ರಮ ಇಂಡಿಯನ್ ಬಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆಯಾಗಿ ಮೂಡಿಬರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *