Header Ads
Header Ads
Breaking News

ಪುತ್ತೂರು:ಅಡಕೆ ಕೊಳೆರೋಗದ ಪರಿಹಾರ ನೀಡದಿದ್ದರೆ ಉಗ್ರ ಪ್ರತಿಭಟನೆ

ಸರಕಾರ ಡಿಸೆಂಬರ್ 10ರ ಒಳಗೆ ಕೊಳೆರೋಗದ ಪರಿಹಾರ ನೀಡದೇ ಹೋದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈತಸಂಘ,ಹಸಿರು ಸೇನೆ ಎಚ್ಚರಿಸಿದೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಈಗಾಗಲೇ ಸರಕಾರದ ವತಿಯಿಂದ ಅಧಿಕಾರಿಗಳು ಕೋಳೆರೋಗದಿಂದ ಹಾನಿಗೀಡಾದ ಕೃಷಿಕನ ಮಾಹಿತಿಯನ್ನು ಪಡೆದಿದ್ದಾರೆ. ಈ ಮಾಹಿತಿ ಪಡೆದು ತಿಂಗಳು ಕಳೆದರೂ ಈವರೆಗೂ ಪರಿಹಾರ ವಿತರಿಸುವ ಕಾರ್ಯವನ್ನು ಸರಕಾರ ಮಾಡಿಲ್ಲ. ಕೊಳೆರೋಗಕ್ಕೆ ತುತ್ತಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಸರಕಾರ ಕೂಡಲೇ ಕೊಳೆರೋಗದ ಪರಿಹಾರವನ್ನು ವಿತರಿಸಬೇಕು. ಡಿಸೆಂಬರ್ 10 ರ ಒಳಗೆ ಪರಿಹಾರ ನೀಡದೇ ಹೋದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.

Related posts

Leave a Reply