Header Ads
Header Ads
Breaking News

ಅಪರಿಚಿತರಿಂದ ವ್ಯಾಪಾರಿಗೆ ಮಾರಣಾಂತಿಕ ಹಲ್ಲೆ ಪ್ರಕರಣ:ಅರೋಪಿಗಳ ಬಂಧನಕ್ಕೆ ವರ್ತಕರ ಮನವಿ

ಪುತ್ತೂರು:ನವಂಬರ್ 29 ರಂದು ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ಕೇಶವ ನಾಯಕ್ ಎನ್ನುವ ವ್ಯಾಪಾರಿಗೆ ಐದು ಮಂದಿ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪುತ್ತೂರು ವರ್ತಕರ ಸಂಘ ಪೋಲೀಸರನ್ನು ಒತ್ತಾಯಿಸಿದೆ. ಹಲ್ಲೆಗೊಳಗಾದ ಕೇಶವ ನಾಯಕ್ ಸಂಘದ ಸಕ್ರಿಯ ಸದಸ್ಯರಾಗಿದ್ದು, ವ್ಯವಹಾರದ ಹಿನ್ನಲೆಯಲ್ಲಿ ಈ ಹಲ್ಲೆ ನಡೆದಿರುವ ಸಾಧ್ಯತೆಯಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ ಸಂಘದ ಪದಾಧಿಕಾರಿಗಳು ಒಂದು ವೇಳೆ ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದಲ್ಲಿ, ಸಂಘ ತನ್ನ ಮುಂದಿನ ನಡೆಯನ್ನು ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದೆ.

Related posts

Leave a Reply