Header Ads
Header Ads
Breaking News

ಪುತ್ತೂರು:ಖಾಸಗಿ ಆಸ್ಪತ್ರೆಗಳ ವೈದ್ಯರ ಮೇಲೆ ಆಪಾದನೆ ನ.11ರಂದು ಪ್ರತಿಭಟನೆ

ಪುತ್ತೂರಿನಲ್ಲಿ ಪದೇ ಪದೇ ವೈದ್ಯರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಲಾಗುತ್ತಿದೆ. ವೈದ್ಯರ ನಿರ್ಲಕ್ಷ್ಯ ಎಂಬ ಶಬ್ದವನ್ನು ಆಗಾಗ ಅನಗತ್ಯವಾಗಿ ಬಳಸಲಾಗುತ್ತಿದ್ದು, ವೈದ್ಯರ ಮೇಲೆ ದಬ್ಬಾಳಿಕೆ, ಬೆದರಿಕೆ ಒಡ್ಡಲಾಗುತ್ತಿದೆ. ಸಮಾಜದ ನಿರ್ದಿಷ್ಟ ಭಾಗವನ್ನು ವೈದ್ಯರ ವಿರುದ್ಧ ಮತ್ತು ಖಾಸಗಿ ಆಸ್ಪತ್ರೆಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಶಾಖೆ ಮತ್ತು ಪುತ್ತೂರು ಖಾಸಗಿ ಆಸ್ಪತ್ರೆಗಳ ಮಾಲೀಕರ ಸಂಘ ಹೇಳಿದೆ.

ಇತ್ತೀಚೆಗೆ ನಡೆದ ಘಟನೆಯೊಂದರಿಂದ ಪುತ್ತೂರಿನ ವೈದ್ಯರು ಮತ್ತು ವಿಶೇಷವಾಗಿ ಪ್ರಸೂತಿ ತಜ್ಞರು ಸಾಕಷ್ಟು ನೊಂದಿದ್ದಾರೆ. ಈ ನೋವನ್ನು ವ್ಯಕ್ತಪಡಿಸಿ ಸಮಾಜದ ಮುಂದೆ ನ್ಯಾಯ ಬೇಡಲು ನಿರ್ಧರಿಸಿದ್ದಾರೆ. ಅದರಂತೆ ನವೆಂಬರ್ 10ರಂದು ಶನಿವಾರ ಬೆಳಗ್ಗೆ ೬ರಿಂದ ನ.11ರಂದು ಭಾನುವಾರ ಬೆಳಗ್ಗೆ 6ಗಂಟೆಯವರೆಗೆ ಪುತ್ತೂರು ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರು 24ಗಂಟೆಗಳ ಮುಷ್ಕರ ನಡೆಸಲಿದ್ದಾರೆ. ಈ ಅವಧಿಯಲ್ಲಿ ಅವರು ಯಾರೂ ಸೇವೆಗೆ ಲಭ್ಯರಿರುವುದಿಲ್ಲ ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಶಾಖೆಯ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಜೆ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗಳ ಮಾಲೀಕರ ಸಂಘದ ಅಧ್ಯಕ್ಷ ಡಾ.ಶ್ರೀಪತಿ ರಾವ್, ಉಪಾಧ್ಯಕ್ಷ ಡಾ. ಭಾಸ್ಕರ್ ರಾವ್, ಹಿರಿಯ ಪ್ರಸೂತಿ ತಜ್ಞ ಡಾ. ಸುಬ್ರಾಯ ಭಟ್ ಮತ್ತು ವೈದ್ಯಕೀಯ ತಜ್ಞರಾದ ಡಾ. ನಝೀರ್ ಉಪಸ್ಥಿತರಿದ್ದರು

Related posts

Leave a Reply