Header Ads
Header Ads
Breaking News

ಪುತ್ತೂರು:ಜ. 22-24 ರಂದು ಫಿಲೋಮಿನಾ ಕಾಲೇಜಿನ ವಜ್ರಮಹೋತ್ಸವದ ಸಮಾರೋಪ

ಪುತ್ತೂರು: ಆರು ದಶಕಗಳ ಸುದೀರ್ಘ ಕಾಲಾವಧಿಯಲ್ಲಿ ಗಣನೀಯ ಶೈಕ್ಷಣಿಕ ಸಾಧನೆಯ ಮೂಲಕ ನಾಡಿನಾದ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೆಂದು ಗುರುತಿಸ್ಪಟ್ಟಿರುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ವಜ್ರಮಹೋತ್ಸವ ಆಚರಣೆಯಲ್ಲಿದೆ. ಜನವರಿ 22 ರಿಂದ 24 ರ ತನಕ ಸಮಾರೋಪ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಿದೆ ಎಂದು ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಹೇಳಿದರು.
ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉನ್ನತ ಶಿಕ್ಷಣದ ಕನಸು ಕಂಡ ದಿವ್ಯ ಚೇತನ ಮೊ| ಆಂಟನಿ ಪತ್ರಾವೊ ಇವರ ದೂರದರ್ಶಿತ್ವದ ಫಲವಾಗಿ 1958ರಲ್ಲಿ ಆರಂಭಗೊಂಡ ಸಂತ ಫಿಲೊಮಿನಾ ಕಾಲೇಜು ಕೆಥೋಲಿಕ್ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ. ಈ ಕಾಲೇಜು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಯ ಪ್ರತೀಕವಾಗಿ ಯುಜಿಸಿಯಿಂದ ಸ್ಥಾಪಿಸಲ್ಪಟ್ಟ ನ್ಯಾಕ್ ಸಂಸ್ಥೆಯು ’ಎ’ ಶ್ರೇಣಿಯ ಮೌಲ್ಯಾಂಕನ, ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ನಿರ್ಫ್ ಸಂಸ್ಥೆಯು ದೇಶದ ಅತ್ಯುತ್ಕೃಷ್ಟ 200 ಕಾಲೇಜುಗಳಲ್ಲಿ ಒಂದು ಎಂದು ಪರಿಗಣಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ವಜ್ರಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭವನ್ನು ಆಚರಿಸಲು ಕಾಲೇಜು ಸಜ್ಜುಗೊಂಡಿದ್ದು, ಜನವರಿ22 ರಂದು ಪೂರ್ವಾಹ್ನ ಘಂಟೆ 10 ಕ್ಕೆ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಮಾಜಿ ಕಾರ್ಯದರ್ಶಿ ಹಾಗೂ ಶಕ್ತಿ ನಗರ ಕ್ರೈಸ್ತ ದೇವಾಲಯದ ಧರ್ಮಗುರುಗಳಾಗಿರುವ ಅತಿ ವಂದನೀಯ ಜೆರಾಲ್ಡ್ ಡಿ’ಸೋಜ ಇವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ಜರಗಲಿವೆ. ಅಪರಾಹ್ನ ಘಂಟೆ 2.30 ಕ್ಕೆ ಸ್ಪಂದನ ಸಭಾಭವನದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ, ಸಾಯಂಕಾಲ ಘಂಟೆ 4.30 ಕ್ಕೆ ಕಾಲೇಜು ಪ್ರಾಂಗಣದಲ್ಲಿ ರಕ್ಷಕ ಶಿಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ವಾಷಿಕೋತ್ಸವವನ್ನು ಆಚರಿಸಲಾಗುವುದು. ಜನವರಿ 22ರಿಂದ 24ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿಕದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ, ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ದಿನಕರ ರಾವ್ ಉಪಸ್ಥಿತರಿದ್ದರು.

Related posts

Leave a Reply