Header Ads
Header Ads
Breaking News

ಪುತ್ತೂರು:ಟೈಲ್ಸ್ ಗಳ ಬೃಹತ್ ಸಂಗ್ರಹದ ಸಿರಾಮಿಕ್ ಕಲೆಕ್ಷನ್ ಶುಭಾರಂಭ

ಪುತ್ತೂರು: ಟೈಲ್ಸ್ ಗಳ ಬೃಹತ್ ಸಂಗ್ರಹದ ಸಿರಾಮಿಕ್ ಕಲೆಕ್ಷನ್ ಪುತ್ತೂರಿನ ಮುರದಲ್ಲಿರುವ ಬಿಯುಹೆಚ್ ಕಾಂಪ್ಲೆಕ್ಸ್ ನಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು.ಸಂಸ್ಥೆಯನ್ನು ಸಯ್ಯದ್ ಜಾಫರ್ ಅಲಿ ತಂಙಳ್ ಕುಂಬೋಳ್ ಮಳಿಗೆಯನ್ನು ಉದ್ಘಾಟಿಸಿದರು. ಕೆದಿಲ ನಿವಾಸಿ ಹರೀಶ್ ರವರು ಪ್ರಥಮ ಗ್ರಾಹಕರಾದರಾಗಿ ಟೈಲ್ಸ್ ಖರೀದಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೌರಾಯುಕ್ತೆ ರೂಪಾ ಟಿ. ಶೆಟ್ಟಿಯವರು ರಿಬ್ಬನ್ ಕಟ್ಟಿಂಗ್ ಮಾಡಿ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಒಂದು ಟೈಲ್ಸ್ ನ ಶೋರೂಂ ಅಗತ್ಯವಾಗಿ ಬೇಕಾಗಿದೆ. ಇಲ್ಲಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಗ್ರಾಹಕರ ಅಬಿರುಚಿಗೆ ತಕ್ಕುದಾಗಿ ಟೈಲ್ಸ್‌ಗಳನ್ನು ಜೋಡಿಸಲಾಗಿದ್ದು ಆಯ್ಕೆಗೆ ವಿಪುಲ ಅವಕಾಶವಿದೆ. ಸಂಸ್ಥೆಗೆ ಉತ್ತಮ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭಾ ಸದಸ್ಯರಾದ ಜೀವಂಧರ್ ಜೈನ್ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲಾಕೇಂದ್ರವಾಗಲಿರುವ ಪುತ್ತೂರಿನ ಪಕ್ಕದ ಮುರದಲ್ಲಿ ಇಂತಹ ಸಂಸ್ಥೆಯನ್ನು ಹುಟ್ಟುಹಾಕಿರುವುದು ತುಂಬ ಸಂತಸದ ವಿಚಾರವಾಗಿದೆ. ಇಂದಿನ ಕಾಂಪಿಟೇಶನ್ ಯುಗದಲ್ಲಿ ಉತ್ತಮ ಕ್ವಾಲಿಟಿಯ ವಸ್ತುಗಳನ್ನು ನೀಡಿದಲ್ಲಿ ಗ್ರಾಹಕರ ವಿಶ್ವಾಸ ಗಳಿಸಲು ಸಹಕಾರಿಯಾಗುತ್ತದೆ ಎಂದರು.ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಷನ್ ಅಧ್ಯಕ್ಷ, ವಿನ್ಯಾಸ್ ಕನ್‌ಸ್ಟ್ರಕ್ಷನ್ಸ್‌ನ ಕಿಶೋರ್ ಕುಮಾರ್ ಎ., ನಗರಸಭಾ ಸದಸ್ಯ ಸಂತೋಷ್ ಕುಮಾರ್, ಕಲ್ಲೇಗ ಜುಮ್ಮಾ ಮಸ್ಜಿದ್‌ನ ಅಧ್ಯಕ್ಷ ಶಕೂರ್ ಹಾಜಿ, ಸಂಸ್ಥೆಯ ಮ್ಹಾಲಕರಾದ ಮಹಮ್ಮದ್ ಖಲಂದರ್ ಕೆ.ಎ, ತಾರಿಕ್ ಝಿಯಾದ್ ಉಪಸ್ಥಿತರಿದ್ದರು.ಸಂಸ್ಥೆಯ ಶುಭಾರಂಭದ ಪ್ರಯುಕ್ತ ಗ್ರಾಹಾಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಈ ಭಾಗದ ಹೆಚ್ಚಿನ ಜನರು ನಮ್ಮ ಪೆರ್ಲ ಸಂಸ್ಥೆಗೆ ಬಂದು ಟೈಲ್ಸ್ ಗಳನ್ನು ಖರೀದಿಸುತ್ತಿದ್ದರು. ಆದ್ದರಿಂದ ಈ ಭಾಗದ ಜನರಿಗೆ ಸಹಕಾರಿಯಾಗಲೆಂದು ಪುತ್ತೂರಿನ ಮುರದಲ್ಲಿ ನೂತನ ಸಂಸ್ಥೆಯನ್ನು ತೆರೆದಿದ್ದೇವೆ. ನಮ್ಮಲ್ಲಿ ಉಚಿತ ಡೋರ್ ಡೆಲಿವರಿ ವ್ಯವಸ್ಥೆ ಇದ್ದು ಗ್ರಾಹಕರ ಅನೂಕಲಕ್ಕಾಗಿ ಆಯ್ಕೆಗೆ ವಿಫುಲ ಅವಕಾಶವಿದೆ. ಮಳಿಗೆಯಲ್ಲಿ ಟೈಲ್ಸ್, ಸಿರಾಮಿಕ್ ಟೈಲ್ಸ್, ಗ್ರಾನೈಟ್ಸ್, ಸ್ಯಾನಿಟರಿ ವೇರ್‍ಸ್, ಡಿಜಿಟಲ್ ವಾಲ್ ಟೈಲ್ಸ್, ಸಿಪಿ ಫಿಟ್ಟಿಂಗ್ಸ್ ಹಾಗೂ ಬಾತ್‌ರೂಂ ಬಿಡಿಭಾಗಗಳು ದೊರಕಲಿವೆ ಎಂದು ಮಾಲಕರು ತಿಳಿಸಿದ್ದಾರೆ.

Related posts

Leave a Reply