Header Ads
Header Ads
Breaking News

ಪುತ್ತೂರು:ಪರ್ಲಡ್ಕ ಪಾಂಗ್ಲಾಯಿಯಲ್ಲಿ ಇಂಟರ್‌ಲಾಕ್ ರಸ್ತೆಯ ಉದ್ಘಾಟನೆ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶ ಆರೋಗ್ಯವಂತಾಗಬೇಕೆಂಬ ದೃಷ್ಟಿಯಿಂದ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರ್ಲಡ್ಕ ಮತ್ತು ಕೊಂಬೆಟ್ಟು ವಾರ್ಡ್‌ಗಳು ಅದಕ್ಕೆ ಪೂರಕವಾಗಿ ಸ್ಪಂದನೆ ಕೊಡುವ ಮೂಲಕ ಕೆಲಸ ಮಾಡುತ್ತಿದೆ. ಈ ಎರಡು ವಾರ್ಡ್‌ಗಳ ಸದಸ್ಯರುಗಳು ದಿನ ನಿತ್ಯ ಜನರ ಒಟ್ಟಿಗೆ ಇದ್ದು ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರಸಭೆ ವತಿಯಿಂದ ಎಸ್‌ಎಫ್‌ಸಿ ಅನುದಾನದಡಿ ನಡೆಯುವ ವಿವಿಧ ಕಾಮಗಾರಿಗಳ ಪೈಕಿ ಇಂದು ಬೆಳಿಗ್ಗೆ ಪರ್ಲಡ್ಕ ಪಾಂಗ್ಲಾಯಿಯಲ್ಲಿ ರೂ. 5ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಇಂಟರ್‌ಲಾಕ್ ರಸ್ತೆಯ ಉದ್ಘಾಟನೆ ಮಾಡಿದ ಬಳಿಕ ಕೊಂಬೆಟ್ಟು ವಾರ್ಡ್‌ನಲ್ಲಿ 5ಲಕ್ಷ ರೂಪಾಯಿ ವೆಚ್ಚದಲ್ಲಿ ಇಂಟರ್‌ಲಾಕ್ ರಸ್ತೆ ಮತ್ತು ಡ್ರೈನೇಜ್ ಸ್ಲಾಬ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕೊಂಬೆಟ್ಟು ವಾರ್ಡ್‌ನ ಗುದ್ದಲಿ ಪೂಜೆ ಸಂದರ್ಭ ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ಶ್ರೀಪತಿ ರಾವ್, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಲಕ್ಷ್ಮೀ ನಾರಾಯಣ ರಾವ್, ನಾಗೇಶ್ ತೆಂಗಿನ ಕಾಯಿ ಒಡೆದರು. ವಾರ್ಡಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್, ಪೌರಾಯುಕ್ತೆ ರೂಪಾ ಶೆಟ್ಟಿ, ಬಿಜೆಪಿ ನಗರಮಂಡಲ ಅಧ್ಯಕ್ಷ ಜೀವಂಧರ್ ಜೈನ್, ದ ಕ. ಲೋಕಸಭಾ ಬಿ.ಜೆ.ಪಿ. ಸಂಚಾಲಕ ಗೋಪಾಲಕೃಷ್ಣ ಹೇರಳೆ, ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ರಾಜೇಶ್ ಬನ್ನೂರು, ಸುಜೀಂಧ್ರ ಪ್ರಭು, ಪುರಸಭೆ ಮಾಜಿ ಸದಸ್ಯ ಪಾಂಡುರಂಗ ಹೆಗ್ಡೆ, ಬಿಜೆಪಿ ನಗರಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಹಾರಾಡಿ, ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಪ್ರೇಮಲತಾ ನಂದಿಲ, ಯಶೋದಾ ಹರೀಶ್, ಗೌರಿ ಬನ್ನೂರು, ಪದ್ಮನಾಭ ನಾಯ್ಕ, ಮೋಹಿನಿ ವಿಶ್ವನಾಥ ಗೌಡ, ವಿದ್ಯಾ ಆರ್ ಗೌರಿ, ಮನೋಹರ್ ಕಲ್ಲಾರೆ, ಸುಂದರ ಪೂಜಾರಿ ಬಡಾವು, ವಸಂತ ಕಾರೆಕ್ಕಾಡು, ಸಂತೋಷ್ ಕುಮಾರ್ ಬೊಳುವಾರು, ಶಿವರಾಮ, ಶಶಿಕಲಾ ಸಿ.ಎಸ್, ಪುರಸಭೆ ಮಾಜಿ ಅಧ್ಯಕ್ಷೆ ಪ್ರೇಮಲತಾ ರಾವ್, ಸ್ಥಳೀಯರಾದ ಎಮ್.ಎಸ್ ವೈದ್ಯ, ಗಂಗಾಧರ ಪೈ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Related posts

Leave a Reply