Header Ads
Header Ads
Breaking News

ಪುತ್ತೂರು:ಬಿಜೆಪಿಯಿಂದ ಚಿಂತನ ಮಂಥನ ಕಾರ್ಯಕ್ರಮ

ಪುತ್ತೂರಿನಲ್ಲಿ ಬಿಜೆಪಿ ಆಶ್ರಯದಲ್ಲಿ ಸಮಾಜದ ವಿವಿಧ ವೃತ್ತಿ ನಿರತರ ಚಿಂತನ-ಮಂಥನ ಸಭೆಯು ನಡೆಯಿತು. ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಪಂಜಾಬ್ ಸಂಸದ ಅವಿನಾಶ್ ರಾಯ್ ಖನ್ನಾ ಆಗಮಿಸಿ ಸಂವಾದದಲ್ಲಿ ಪಾಲ್ಗೊಂಡರು.ಇದೇ ವೇಳೆ ಮಾತನಾಡಿ ಪಂಜಾಬ್ ಸಂಸದ ಅವಿನಾಶ್ ರಾಯ್ ಖನ್ನಾ ಅವರು, ನೀತಿ, ನಿಯತ್ತು, ಕೆಲಸ ಮಾಡುವ ಇಚ್ಛಾಶಕ್ತಿ ಹಾಗೂ ಬಲಿಷ್ಠ ನಾಯಕತ್ವ ಬಿಜೆಪಿ ಬಳಿ ಮಾತ್ರ ಇದೆ. ವಿರೋಧ ಪಕ್ಷದವರ ಬಳಿ ಅವರ ನಾಯಕ ಯಾರು ಎಂದು ಕೇಳಿದರೆ ಈಗಲೂ ಉತ್ತರವಿಲ್ಲ ಎಂದರು.ಬಳಿಕ ನಡೆದ ಸಂವಾದದಲ್ಲಿ ಪ್ರಮುಖರಾದ ಪಿ. ವಾಮನ ಪೈ, ಡಾ. ದೀಪಕ್ ರೈ, ಸಿವಿಲ್ ಇಂಜಿನಿಯರ್ ವಸಂತ ಭಟ್, ನ್ಯಾಯವಾದಿ ಕೆ. ಜಯಾನಂದ ಸಹಿತ ವಿವಿಧ ಗಣ್ಯರು ಪಾಲ್ಗೊಂಡರು. ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *