Header Ads
Header Ads
Breaking News

ಪುತ್ತೂರು:ಮನೆಯೊಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

ಯುವಕನೊಬ್ಬ ತನ್ನ ಮನೆಯೊಳಗೆ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪ ನಡೆದಿದೆ. 

ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬೋಳೋಡಿ ಕೆರೆಮೂಲೆ ನಿವಾಸಿ ಹಸೈನಾರ್ ಅವರ ಪುತ್ರ ಮುಸ್ತಾಫ (೨೫) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಅಡಿಕೆ ಸುಲಿಯುವ ಕಾಯಕ ನಡೆಸುತ್ತಿದ್ದ ಮುಸ್ತಾಫ ಅವರು ತುಸು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಮುಸ್ತಾಫ ಅವರ ತಂದೆ ಎಂದಿನಂತೆ ಸೋಮವಾರ ಕೂಲಿ ಕೆಲಸಕ್ಕೆ ತೆರಳಿದ್ದರು. ತಾಯಿ ಮನೆಯ ಅಡುಗೆ ಕೋಣೆಯೊಳಗೆ ಅಡುಗೆ ತಯಾರಿಯಲ್ಲಿದ್ದರು. ಈ ಸಂದರ್ಭವನ್ನು ನೋಡಿಕೊಂಡು ಮುಸ್ತಾಫ ಅವರು ಮನೆಯೊಳಗೆ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತರ ತಂದೆ ಹಸೈನಾರ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply