Header Ads
Header Ads
Breaking News

ಪುತ್ತೂರು:ರಾಜ್ಯಮಟ್ಟದ ಶಾರ್ಟ್‌ಕೋರ್ಸ್ ಈಜು ಚಾಂಪಿಯನ್‌ಶಿಫ್ ಸಮಾರೋಪ

ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜ್ಯಮಟ್ಟದ ಶಾರ್ಟ್‌ಕೋರ್ಸ್ ಈಜು ಚಾಂಪಿಯನ್‌ಶಿಪ್ ಸಮಾರೋಪ ಕಂಡಿತು. ಈ ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್ ಬೆಂಗಳೂರು ವಿನ್ನರ್‍ಸ್, ಬಸವನಗುಡಿ ಅಕ್ವೆಟಿಕ್ ಕ್ಲಬ್ ಬೆಂಗಳೂರು ರನ್ನರ್‍ಸ್ ಹಾಗೂ ಜೂನಿಯರ್ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕ್ಲಬ್ ವಿನ್ನರ್‍ಸ್ ಹಾಗೂ ಬಿಎಸ್‌ಆರ್‌ಸಿ ಬೆಂಗಳೂರು ರನ್ನರ್‍ಸ್ ಆಗಿ ಹೊರಹೊಮ್ಮಿತು.


ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಪುತ್ತೂರು ಅಕ್ವೇಟಿಕ್ ಕ್ಲಬ್‌ನ ಸಹಯೋಗದಲ್ಲಿ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜ್ಯಮಟ್ಟದ ಶಾರ್ಟ್‌ಕೋರ್ಸ್ ಈಜು ಚಾಂಪಿಯನ್‌ಶಿಫ್‌ನಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್ ಬೆಂಗಳೂರು ವಿನ್ನರ್‍ಸ್, ಬಸವನಗುಡಿ ಅಕ್ವೆಟಿಕ್ ಕ್ಲಬ್ ಬೆಂಗಳೂರು ರನ್ನರ್‍ಸ್ ಹಾಗೂ ಜೂನಿಯರ್ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕ್ಲಬ್ ವಿನ್ನರ್‍ಸ್ ಹಾಗೂ ಬಿಎಸ್‌ಆರ್‌ಸಿ ಬೆಂಗಳೂರು ರನ್ನರ್‍ಸ್ ಆಗಿ ಹೊರಹೊಮ್ಮಿತು.


ನಾಲ್ಕನೇ ದಿನವಾದ ಭಾನುವಾರ ಒಟ್ಟು ಎರಡು ಕೂಟ ದಾಖಲೆ ನಿರ್ಮಾಣಗೊಂಡಿದ್ದು, ಹುಡುಗರ 50 ಮೀ. ಬ್ರೆಸ್ಟ್‌ಸ್ಟ್ರಾಕ್‌ನಲ್ಲಿ ಡಾಲ್ಫಿನ್ ಅಕ್ವೇಟಿಕ್ ಕ್ಲಬ್‌ನ ವಿಧಿತ್ ಎಸ್.ಶಂಕರ್ 34.23 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಹುಡುಗಿಯರ 100 ಮೀ. ಬಟರ್‌ಫ್ಲೈನಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್‌ನ ನೀನಾ ವೆಂಕಟೇಶ್ 1 ನಿಮಿಷ 5.3 ಸೆಕೆಂಡ್‌ನಲ್ಲಿ ಗುರಿ ತಲುಪಿ ಕೂಟ ದಾಖಲೆ ಮಾಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೃಷ್ಣಮೂರ್ತಿ ವಾರಣಾಸಿ, ಸಹಜ್ ರೈ, ಅಧ್ಯಕ್ಷೆ ಪ್ರತಿಮಾ ಹೆಗ್ಡೆ ,ಆನಂದ ದೇಸಾಯಿ, ಡಾ.ಹರಿಕೃಷ್ಣ ಪಾಣಾಜೆ, ನಾಗರಾಜ್, ಸುಂದರೇಶ್, ರಾಜೇಶ್ ಹೆಗ್ಡೆ ಬಹುಮಾನ ವಿತರಿಸಿದರು. ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಪಾರ್ಥ ವಾರಣಾಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply