Header Ads
Header Ads
Breaking News

ಪುತ್ತೂರು:ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಣೆ

ಪುತ್ತೂರಿನ ವಿದ್ಯಾಮಾತಾ ಫೌಂಡೇಶನ್ ವತಿಯಿಂದ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 9ಜನ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು.

ಡಿಸೆಂಬರ್ ಎರಡನೇ ವಾರದಲ್ಲಿ ಕೋಲ್ಕತ್ತಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಬೆಳ್ತಂಗಡಿಯ ಮುಂಡಾಜೆ ವಿವೇಕಾನಂದ ಶಾಲೆಯ ವಿದ್ಯಾರ್ಥಿನಿಯರಾದ ನಿಖಿತಾ, ಚೈತನ್ಯ, ಪ್ರಗತಿ, ಸಂಗೀತಾ, ಹರಿಣಾಕ್ಷಿ, ಮೋಕ್ಷಿತಾ, ತುಳಸಿ, ಕಾವ್ಯಾ, ಹರ್ಷಿತಾ ಒಂಭತ್ತು ವಿದ್ಯಾರ್ಥಿಗಳು ಸೇರಿದಂತೆ ಹಾಸನದ ಮೂವರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಉಚಿತ ಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಮಾತಾ ಫೌಂಡೇಶನ್‌ನ ಅಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ, ಇದೊಂದು ಚಿಕ್ಕ ಕೊಡುಗೆ. ಇನ್ನಷ್ಟು ದಾನಿಗಳು ಮುಂದೆ ಬಂದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಸೂರ್ತಿ ಆಗಬೇಕು ಎಂಬ ಆಶಯ ನಮ್ಮದು. ಗ್ರಾಮೀಣ ಪ್ರತಿಭೆಗಳು ಮೇಲ್ಮಟ್ಟಕ್ಕೆ ಬರಲು ಸಾಕಷ್ಟು ಕಷ್ಟ ಇದೆ ಎಂದರು.

ಈ ಸಂದರ್ಭ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಉದ್ಯಮಿ ಪ್ರವೀಣ್ ರೈ, ವಿದ್ಯಾಮಾತಾ ಫೌಂಡೇಶನ್‌ನ ಸಂಚಾಲಕ ಮನೀಶ್ ವರ್ಮಾ, ಸಂಸ್ಥೆಯ ಸಹೋದ್ಯೋಗಿಗಳಾದ ಅಕ್ಷಿತಾ, ಉಪಸ್ಥಿತರಿದ್ದರು.

Related posts

Leave a Reply